ಇವರು ಅತ್ಯಂತ ಕಳಪೆ... ಪಾಕಿಸ್ತಾನ ಆಟಗಾರರು ಮುಟ್ಟಿ ನೋಡಿಕೊಳ್ಳುವಂತೆ ಹೇಳಿದ ಸ್ಟುವರ್ಟ್ ಬ್ರಾಡ್

ಪಾಕಿಸ್ತಾನ ಆಟಗಾರರು ಮುಟ್ಟಿ ನೋಡಿಕೊಳ್ಳುವಂತೆ ಹೇಳಿದ ಸ್ಟುವರ್ಟ್ ಬ್ರಾಡ್
ಪಾಕಿಸ್ತಾನ ಆಟಗಾರರು ಮುಟ್ಟಿ ನೋಡಿಕೊಳ್ಳುವಂತೆ ಹೇಳಿದ ಸ್ಟುವರ್ಟ್ ಬ್ರಾಡ್
Published on
ಲಂಡನ್: ಇಂಗ್ಲೆಂಡ್ ತಂಡದ ಮಾಜಿ ಸ್ಟಾರ್​ ವೇಗಿ ಸ್ಟುವರ್ಟ್ ಬ್ರಾಡ್ ಇದೀಗ ಪಾಕಿಸ್ತಾನ ಟೆಸ್ಟ್ ತಂಡದ ವಿರುದ್ದ ನಾಲಿಗೆ ಹರಿಬಿಟ್ಟಿರುವುದು ಸದ್ಯ ಪಾಕ್​ ಕ್ರಿಕೆಟ್​ ಅಭಿಮಾನಿಗಳನ್ನು ಕೆರಳಿಸಿದೆ.
'ದಿ ಲವ್ ಫಾರ್ ಕ್ರಿಕೆಟ್' ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಬ್ರಾಡ್​, ಪಾಕ್ ಒಂದು ಅತ್ಯಂತ ಕಳಪೆ ತಂಡ. ಪ್ರಸಕ್ತ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಮ್ಮ ತಂಡದವರು 3-0 ಅಂತರದಿಂದ ಸುಲಭವಾಗಿ ಪಾಕಿಸ್ತಾನವನ್ನು ಕ್ಲೀನ್ ಸ್ವೀಪ್ ಮಾಡಬೇಕು. ಅಕಸ್ಮಾತ್ ಆ ರೀತಿ ಗೆಲ್ಲಲು ವಿಫಲವಾದರೆ ಅದು ಇಂಗ್ಲೆಂಡ್‌ಗೆ ಭಾರಿ ಮುಖಭಂಗ ಉಂಟಾಗಲಿದೆ ಎಂದು ಹೇಳಿದ್ದಾರೆ.

ಹೆಡಿಂಗ್ಲೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಮೇಲುಗೈ

ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪೂರ್ಣ ಆಧಿಪತ್ಯ ಸಾಧಿಸಿದೆ. ಪಾಕಿಸ್ತಾನವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 171 ರನ್‌ಗೆ ಆಲೌಟ್ ಮಾಡಿದ್ದ ಇಂಗ್ಲೆಂಡ್, ಎರಡನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 366 ರನ್ ಕಲೆಹಾಕಿ 195 ರನ್‌ಗಳ ಭಾರಿ ಮುನ್ನಡೆ ಕಾಯ್ದುಕೊಂಡಿದೆ.

ಬ್ಯೂಕ್​ ಅಬ್ಬರ

ಆರಂಭದಲ್ಲೇ ಕ್ಯಾಚ್​ನಿಂದ ಔಟಾಗಬೇಕಿದ್ದ ಹ್ಯಾರಿ ಬ್ರೂಕ್​, ಇದರ ಲಾಭ ಪಡೆದು 13 ಬೌಂಡರಿಗಳ ನೆರವಿನಿಂದ ಕೇವಲ 93 ಎಸೆತಗಳಲ್ಲಿ 91 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಇನ್ನು, ಜೋ ರೂಟ್ (66 ರನ್​) ಹಾಗೂ ಜೋರ್ಡಾನ್ ಕಾಕ್ಸ್ (73) 3ನೇ ವಿಕೆಟ್‌ಗೆ 150 ರನ್‌ಗಳ ಅತ್ಯುತ್ತಮ ಜತೆಯಾಟ ಆಡಿದರು. ಅವರ ಬಳಿಕ ಡೆನ್ ಲಾರೆನ್ಸ್ ಕೂಡ ಆಕರ್ಷಕ ಅರ್ಧಶತಕ (51) ಬಾರಿಸುವ ಮೂಲಕ ಕೊಡುಗೆ ನೀಡಿದರು.
ಮತ್ತೊಂದೆಡೆ, ಗಾಯಗೊಂಡ ಬಾಬರ್ ಅಜಮ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಸಲ್ಮಾನ್ ಅಲಿ ಅಗಾ, ಖುರ್ರಂ ಶಹಜಾದ್ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿ ಹ್ಯಾರಿ ಬ್ರೂಕ್ ಕೊಟ್ಟ ಸುಲಭದ ಕ್ಯಾಚ್ ಕೈಚೆಲ್ಲಿದ್ದು ಪಾಕಿಸ್ತಾನಕ್ಕೆ ಭಾರಿ ಹೊಡೆತ ನೀಡಿತು. ಬೌಲಿಂಗ್​ನಲ್ಲಿ ತಂಡದ ಪರ ಆಲಿ ಉಸ್ಮಾನ್ (5 ವಿಕೆಟ್​, 92 ರನ್​) 3ನೇ ಟೆಸ್ಟ್ ಪಂದ್ಯದಲ್ಲೇ ಚೊಚ್ಚಲ 5 ವಿಕೆಟ್ ಗೊಂಚಲು ಪಡೆದು ಮಿಂಚಿದರು. ಇದಕ್ಕೂ ಮೊದಲು ಬೌಲಿಂಗ್ ಮಾಡಿದ ಇಂಗ್ಲೆಂಡ್‌ ಪರ ಓಲಿ ರಾಬಿನ್ಸನ್ (5 ವಿಕೆಟ್​, 51 ರನ್​) ಹಾಗೂ ಜೋಶ್ ಟಂಗ್ 46 ರನ್​ ಕೊಟ್ಟು 5 ವಿಕೆಟ್​ ಕಬಳಿಸಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net