ಅಂಕಪಟ್ಟಿಯ ಅಗ್ರ 2 ತಂಡಗಳು ಕ್ವಾಲಿಫೈಯರ್-1ರಲ್ಲಿ ಸೆಣಸಲಿದ್ದು, ಗೆದ್ದ ತಂಡ ನೇರವಾಗಿ ಫೈನಲ್‌ಗೇರಿದರೆ, ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಇದರಿಂದ, +0.400 ರನ್‌ರೇಟ್ ಹೊಂದಿರುವ ಗುಜರಾತ್ ಟೈಟಾನ್ಸ್, ಸಿಎಸ್‌ಕೆ ಎದುರು ಸುಲಭವಾಗಿ ಗೆದ್ದರೆ, ಅಗ್ರ-2ರಲ್ಲಿ ಸ್ಥಾನ ಖಾತ್ರಿಪಡಿಸಿಕೊಳ್ಳಲಿದೆ. ಜತೆಗೆ ಆರ್‌ಸಿಬಿ ತನ್ನ ಕೊನೇ ಪಂದ್ಯದಲ್ಲಿ 88 ರನ್ ಅಂತರದಿಂದ ಸೋತರೆ, ಗುಜರಾತ್ ಅಗ್ರಸ್ಥಾನಕ್ಕೂ ಏರಲಿದೆ. ಗುಜರಾತ್ 12ಕ್ಕಿಂತ ಹೆಚ್ಚಿನ ರನ್ ಅಂತರದಲ್ಲಿ ಸೋತು, ಇಷ್ಟೇ ಅಂತರದಿಂದ ಸನ್‌ರೈಸರ್ಸ್ ಗೆದ್ದರೆ ಗುಜರಾತ್ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಗುಜರಾತ್, ಸನ್‌ರೈಸರ್ಸ್ ಎರಡೂ ತಂಡಗಳು ಸೋತರೆ, 16 ಅಂಕದೊಂದಿಗೆ ಅಗ್ರ-2ರಲ್ಲಿ ಸ್ಥಾನ ಪಡೆಯುವ ಅವಕಾಶ ರಾಜಸ್ಥಾನಕ್ಕೂ ಸಿಗಲಿದೆ.