ಚೊಚ್ಚಲ ಆವೃತ್ತಿಯ ಅಂಧ ಮಹಿಳೆಯರ ಟಿ20 ವಿಶ್ವಕಪ್​: ಆತಿಥೇಯ ಭಾರತ ಶುಭಾರಂಭ

ಚೊಚ್ಚಲ ಆವೃತ್ತಿಯ ಅಂಧ ಮಹಿಳೆಯರ ಟಿ20 ವಿಶ್ವಕಪ್​: ಆತಿಥೇಯ ಭಾರತ ಶುಭಾರಂಭ
ಚೊಚ್ಚಲ ಆವೃತ್ತಿಯ ಅಂಧ ಮಹಿಳೆಯರ ಟಿ20 ವಿಶ್ವಕಪ್​: ಆತಿಥೇಯ ಭಾರತ ಶುಭಾರಂಭ
Published on
ನವದೆಹಲಿ: ಕನ್ನಡತಿ ದೀಪಿಕಾ ಟಿ.ಸಿ. ಸಾರಥ್ಯದ ಆತಿಥೇಯ ಭಾರತ ತಂಡ ಚೊಚ್ಚಲ ಆವೃತ್ತಿಯ ಅಂಧ ಮಹಿಳೆಯರ ಟಿ20 ವಿಶ್ವಕಪ್​ (Women''s T20 Cricket World Cup) ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಭಾರತ ತಂಡ ಮಂಗಳವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 10 ವಿಕೆಟ್​ಗಳಿಂದ ಭರ್ಜರಿ ಗೆಲುವು ಸಾಧಿಸಿತು.

ಮಾಡರ್ನ್​ ಸ್ಕೂಲ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಶ್ರೀಲಂಕಾ ತಂಡ 13.3 ಓವರ್​ಗಳಲ್ಲೇ 41 ರನ್​ಗಳಿಗೆ ಆಲೌಟ್​ ಆಯಿತು. ಲಂಕಾದ 7 ಆಟಗಾರ್ತಿಯರು ರನೌಟ್​ ಆದರು. ದೀಪಿಕಾ ಟಿ.ಎಸ್​, ಗಂಗಾ ಕದಂ ಮತ್ತು ಜಮುನಾ ರಾಣಿ ತಲಾ 1 ವಿಕೆಟ್​ ಪಡೆದರು. ಭಾರತ ತಂಡ 3 ಓವರ್​ಗಳಲ್ಲೇ ವಿಕೆಟ್​ ನಷ್ಟವಿಲ್ಲದೆ 43 ರನ್​ ಗಳಿಸಿ ಜಯಿಸಿತು. ದೀಪಿಕಾ ಟಿ.ಎಸ್​. (26*) ಮತ್ತು ಅನೇಖಾ ದೇವಿ (15*) ಗೆಲುವಿನ ದಡ ಸೇರಿಸಿದರು. 4 ರನೌಟ್​ಗೂ ನೆರವಾದ ಗಂಗಾ ಕದಂ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಮಾಜಿ ಕೇಂದ್ರ ಸಚಿವ ಮತ್ತು ಬಿಸಿಸಿಐ ಮಾಜಿ ಸಚಿವ ಅನುರಾಗ್​ ಠಾಕೂರ್​ ಟೂರ್ನಿಗೆ ಚಾಲನೆ ನೀಡಿದರು. ಭಾರತ ತಂಡ ಬುಧವಾರ ನಡೆಯಲಿರುವ ತನ್ನ 2ನೇ ಪಂದ್ಯದಲ್ಲಿ ಆಸ್ಟ್ರೆಲಿಯಾವನ್ನು ಎದುರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net