10 ಸಿಕ್ಸರ್​ ಬಾರಿಸಿದ ಫಿನ್​ ಸ್ಫೋಟಕ ಶತಕ! ಕೆಕೆಆರ್​ ಎದುರು ಡೆಲ್ಲಿಗೆ ಹೀನಾಯ ಸೋಲು | KKR vs DC​

 KKR vs DC​ ಪಂದ್ಯ
KKR vs DC​ ಪಂದ್ಯ
Published on
KKR vs DC​: ಇಂದು (ಮೇ.08) ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 19ನೇ ಆವೃತ್ತಿಯ ಐಪಿಎಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಎದುರು ಕೋಲ್ಕತ ನೈಟ್​ ರೈಡರ್ಸ್​ ಸುಲಭ ಗೆಲುವು ಸಾಧಿಸಿತು.
ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಕೆಕೆಆರ್​, ಅಕ್ಷರ್ ಪಡೆಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿತು. 20 ಓವರ್​ನಲ್ಲಿ 8 ವಿಕೆಟ್​ ನಷ್ಟಕ್ಕೆ ಡಿಸಿ ಕೇವಲ 142 ರನ್​ ಕಲೆಹಾಕಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಕೋಲ್ಕತ ಪಡೆಗೆ, ಕ್ಯಾಪ್ಟನ್​ ಅಜಿಂಕ್ಯಾ ರಹಾನೆಯಿಂದ ಉತ್ತಮ ಇನ್ನಿಂಗ್ಸ್ ಬರದೆ ಹೋದರೂ ಫಿನ್ ಆ್ಯಲೆನ್​ ಅವರ ಸ್ಫೋಟಕ ಶತಕದಾಟ ಗೆಲುವು ತಂದುಕೊಟ್ಟಿತು.
ಡೆಲ್ಲಿ ಪಡೆಯ ಬೌಲರ್​ಗಳನ್ನು ಕಾಡಿದ ಆ್ಯಲೆನ್​, ಕೇವಲ 47 ಎಸೆತಗಳಲ್ಲಿ 100 ರನ್ (5 ಬೌಂಡರಿ 10 ಸಿಕ್ಸರ್​)​ ಬಾರಿಸಿದರು. ಈ ಮೂಲಕ ಶತಕ ಗಳಿಸಿ, ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದರು. ಇನ್ನು ಬೌಲಿಂಗ್​ನಲ್ಲಿ ಅಕ್ಷರ್​ ಪಟೇಲ್​ ಒಂದು ವಿಕೆಟ್​ ಪಡೆದಿದ್ದು ಬಿಟ್ಟರೆ, ಉಳಿದ ಬೌಲರ್​ಗಳು ಅತ್ಯಂತ ಕಳಪೆ ಪ್ರದರ್ಶನ ತೋರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net