ಮೊದಲ ಬಾರಿ ಕ್ವಾರ್ಟರ್ಫೈನಲ್ ಆಡಿದ ನಾರ್ವೆ ತಂಡದ ಹಾಲೆಂಡ್ ಶೇ 27.7 ಮತ ಪಡೆದಿದ್ದು, 5 ಪಂದ್ಯಗಳಲ್ಲಿ 7 ಗೋಲು ಗಳಿಸಿದ್ದರು. 26 ವರ್ಷದ ಹಾಲೆಂಡ್ ಜತೆಗೆ ಅಟ್ಯಾಕಿಂಗ್ ಆಟಗಾರರಾಗಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ, ಗೋಲ್ಡನ್ ಬೂಟ್ ವಿಜೇತ ಫ್ರಾನ್ಸ್ ಕೈಲಿಯಾನ್ ಎಂಬಾಪೆ ಇದ್ದಾರೆ. ಡಿಫೆಂಡರ್‌ಗಳಾಗಿ ಪೆಡ್ರೊ ಪೊರೊ (ಸ್ಪೇನ್), ಲಿಸಾಂಡ್ರೊ ಮಾರ್ಟಿನೆಜ್ (ಅರ್ಜೆಂಟೀನಾ), ದಯೋತ್ ಯಪಮೆಕಾನೊ (ಫ್ರಾನ್ಸ್), ಮಾರ್ಕ್ ಕುಕುರೆಲ್ಲ (ಸ್ಪೇನ್); ಮಿಡ್‌ಫೀಲ್ಡರ್ಸ್: ರೋಡ್ರಿ (ಸ್ಪೇನ್), ಮೈಕೆಲ್ ಒಲಿಸ್ (ಫ್ರಾನ್ಸ್), ಜೂಡ್ ಬೆಲ್ಲಿಂಗ್‌ಹ್ಯಾಂ (ಇಂಗ್ಲೆಂಡ್) ಫಿಫಾ ತಂಡದಲ್ಲಿದ್ದಾರೆ.