

ಫಿಫಾ ವಿಶ್ವಕಪ್ ಸೇರಿ ಇತರ ಟೂರ್ನಿ ಆಯೋಜನೆಯ ಷೇರುಗಳಲ್ಲಿ ಶೇ.20 ಖಾಸಗಿಯವರಿಗೆ ಮಾರಾಟ ಮಾಡುವ ಪ್ರಸ್ತಾಪಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ಫಿಫಾ ಅಧ್ಯಕ್ಷ ಗಿಯಾನಿ
ಇನ್ಫಾಂಟಿನೋಈ ಯೋಜನೆಯನ್ನು ಕೈ ಬಿಟ್ಟಿದ್ದಾರೆ. ಇನ್‌ಫಾಂಟಿನೋ ಸಲಹೆಗಾರ ಸ್ಯಾಚ್ಸ್ ಬ್ಯಾಂಕರ್, ಫಿಫಾ ವಿಶ್ವಕಪ್ ಟೂರ್ನಿಯ ವೈಟ್ ಹೌಸ್ ಪ್ಯಾನೆಲ್‌ನ ಕಾರ್ಲೋಸ್ ಕೊರ್ಡೆರೊ ರಾಜೀನಾಮೆ ಹಾಗೂ ಏಷ್ಯಾ,ಯುರೋಪ್ ಮತ್ತು ಉತ್ತರ ಅಮೆರಿಕಾ ಸಹಿತ 143 ಫುಟ್‌ಬಾಲ್ ಸಂಸ್ಥೆಗಳ ತೀವ್ರ ವಿರೋಧ ನಂತರ ಈ ಯೋಜನೆಯಿಂದ ಹಿಂದೆಸರಿಯುವುದಾಗಿ ಫಿಫಾ ತಿಳಿಸಿದೆ.