ಒಡಿಶಾ ಕ್ರಿಕೆಟ್ ಅಸೋಸಿಯೇಷನ್ ತನ್ನ ಸದಸ್ಯರು ಮತ್ತು ವಿಐಪಿಗಳಿಗೆ ಹೆಚ್ಚಿನ ಸಂಖ್ಯೆಯ ಟಿಕೆಟ್‌ಗಳನ್ನು ಹಂಚಿಕೆ ಮಾಡಿದ್ದರಿಂದ ಮತ್ತು ಕೌಂಟರ್‌ಗಳಲ್ಲಿ ಕಡಿಮೆ ಸಂಖ್ಯೆಯ ಟಿಕೆಟ್‌ಗಳನ್ನು ಮಾತ್ರ ಮಾರಾಟಕ್ಕೆ ಇಟ್ಟಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ ಎನ್ನಲಾಗಿದೆ. ಇದಲ್ಲದೆ, ಟಿಕೆಟ್ ಬೆಲೆ 1,100 ರೂ.ನಿಂದ 6 ಸಾವಿರ ರೂ.ಗೆ ಮಾರಾಟವಾಗಿದೆ ಎಂಬ ಮಾಹಿತಿಯಿದೆ. ಇತರ ಕೆಲವು ಸ್ಥಳಗಳಲ್ಲಿ, ಟಿಕೆಟ್‌ಗಳನ್ನು 11 ಸಾವಿರ ರೂ.ಗೂ ಮಾರಾಟ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.