ಇದೆಂಥಾ ಆ್ಯಟಿಟ್ಯೂಡ್​? ಟೀಮ್ ಇಂಡಿಯಾ ಆಲ್​ರೌಂಡರ್​ ಸುಂದರ್​ ನಡೆಗೆ ಫ್ಯಾನ್ಸ್​ ಬೇಸರ, ಕೆಲವರಿಂದ ಬೆಂಬಲ

ಟೀಮ್ ಇಂಡಿಯಾ ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್
ಟೀಮ್ ಇಂಡಿಯಾ ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್
Published on

ಪ್ರಮುಖ ಮುಖ್ಯಾಂಶಗಳು

  • ಸೆಲ್ಫಿ, ಫೋಟೋ ಕೇಳಿದ ಅಭಿಮಾನಿಗಳಿಗೆ ಬೇಸರ
  • ಫೋಟೋ ಕೊಡಲು ಹಿಂದೇಟು ಹಾಕಿದ ಸುಂದರ್​ ನಡೆಗೆ ಟೀಕೆ
  • ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ವಿಡಿಯೋ
ನವದೆಹಲಿ: ಟೀಮ್ ಇಂಡಿಯಾ ಕ್ರಿಕೆಟಿಗರು ಅಂದರೆ ಕ್ರಿಕೆಟ್​ ಪ್ರೇಮಿಗಳು ಮತ್ತು ಅಭಿಮಾನಿಗಳಿಗೆ ಅದೇನೋ ಒಂದು ಖುಷಿ. ಭಾರತ ಪರ ಆಡುವ ಸ್ಟಾರ್​ ಆಟಗಾರರ ಜತೆ ಒಂದೇ ಒಂದು ಸೆಲ್ಫಿ, ಫೋಟೋ ಅಥವಾ ಆಟೋಗ್ರಾಫ್​ ಸಿಕ್ಕಿದರೆ ಸಾಕು, ತಮ್ಮ ಜೀವನವೇ ಪಾವನ ಎಂದು ಭಾವಿಸುತ್ತಾರೆ. ಅದೇ ರೀತಿ, ಭಾರತ ತಂಡದ ಆಲ್​ರೌಂಡರ್​ ವಾಷಿಂಗ್ಟನ್​ ಸುಂದರ್ ಕಂಡ ಒಂದಷ್ಟು ಅಭಿಮಾನಿಗಳು, ಸೆಲ್ಫಿಗಾಗಿ ಅವರ ಹಿಂದೆಯೇ ಓಡೋಡಿ ಬಂದರು. ಈ ವೇಳೆ​ ಫೋಟೋ ಕೊಡದೆ ಹೋದ ಸುಂದರ್​ ನಡೆಯನ್ನು ಕೆಲವರು ತೀವ್ರವಾಗಿ ಟೀಕಿಸಿದ್ದಾರೆ.
ಹಾಲ್​ವೇಯಿಂದ ನಡೆದುಕೊಂಡು ಬರುತ್ತಿದ್ದ ಸುಂದರ್​ ನೋಡಿದ ಕ್ರಿಕೆಟ್​ ಪ್ರೇಮಿಗಳು, ಕೂಡಲೇ ಅವರ ಹಿಂದೆಯೇ ಬಂದು, ಸೆಲ್ಫಿ ಮತ್ತು ಫೋಟೋಗಾಗಿ ಮುಗಿಬಿದ್ದರು. ಯಾರೊಬ್ಬರಿಗೂ ಫೋಟೋ ಕೊಡಲು ಬಯಸದ ವಾಷಿಂಗ್ಟನ್​, ಅಲ್ಲಿಂದ ಹೆಚ್ಚು ಮಾತನಾಡದೆ ಅಥವಾ ಪ್ರತಿಕ್ರಿಯಿಸದೆ ಕಾಲ್ಕಿತ್ತರು. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಒಂದಷ್ಟು ನೆಟ್ಟಿಗರು ಸುಂದರ್​ ವಿರುದ್ಧ ಕಿಡಿಕಾರಿದ್ದಾರೆ. ಇಷ್ಟೊಂದು ಕೊಬ್ಬು ಇರಬಾರದು ಎಂದೆಲ್ಲ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಹೆಚ್ಚಿನ ಮಂದಿ ಸುಂದರ್ ಪರವೇ ಮಾತನಾಡಿರುವುದು ಗಮನಾರ್ಹ.
ತಮ್ಮ ಅಭಿಮಾನಿಗಳು ಸೆಲ್ಫಿ, ಫೋಟೋ ಕೇಳಲು ಬಂದಾಗ ಈ ರೀತಿಯ ವರ್ತನೆ ನಿಜಕ್ಕೂ ಸರಿಯಲ್ಲ. ಇದೆಲ್ಲ ಒಳ್ಳೆಯದಲ್ಲ ಎಂದಿದ್ದಾರೆ. ಮತ್ತೊಂದೆಡೆ, ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಆಟಗಾರರ ಪರ್ಸನಲ್​ ಸ್ಪೇಸ್​ ಮತ್ತು ಪ್ರೈವೆಸಿಗೆ ತೊಂದರೆ ಮಾಡಬಾರದು. ಬದಲಿಗೆ ಅದನ್ನು ಗೌರವಿಸಬೇಕು. ಇದು ನೀವು ಹೇಳುವಂತಿಲ್ಲ ಎಂದು ಸುಂದರ್​ ಪರ ಅನೇಕರು ಬ್ಯಾಟ್​ ಬೀಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net