2026ರ ಐಪಿಎಲ್​ನಿಂದ ಹೊರಗುಳಿದ ಫಾಫ್​ ಡು ಪ್ಲೆಸಿಸ್​; ಪಾಕಿಸ್ತಾನ ಲೀಗ್​ನಲ್ಲಿ ಕಣಕ್ಕೆ!

2026ರ ಐಪಿಎಲ್​ನಿಂದ ಹೊರಗುಳಿದ ಫಾಫ್​ ಡು ಪ್ಲೆಸಿಸ್
2026ರ ಐಪಿಎಲ್​ನಿಂದ ಹೊರಗುಳಿದ ಫಾಫ್​ ಡು ಪ್ಲೆಸಿಸ್
Published on
ಜೊಹಾನ್ಸ್​ರ್ಬಗ್​: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್​ ಡು ಪ್ಲೆಸಿಸ್​ (Faf du Plessis) ಮುಂದಿನ ವರ್ಷದ ಐಪಿಎಲ್​ 19ನೇ ಆವೃತ್ತಿಯಿಂದ (IPL) ಹೊರಗುಳಿಯಲು ಮತ್ತು ಅದೇ ಸಮಯದಲ್ಲಿ ನಡೆಯಲಿರುವ ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ (PSL) ಆಡಲು ನಿರ್ಧರಿಸಿದ್ದಾರೆ.

2012ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದ ಪ್ಲೆಸಿಸ್​ ಕಳೆದ 14 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಟೂರ್ನಿ ತಪ್ಪಿಸಿಕೊಳ್ಳಲಿದ್ದಾರೆ. ಮುಂಬರುವ ಐಪಿಎಲ್​ ಆಟಗಾರರ ಹರಾಜು ಪ್ರಕ್ರಿಯೆಗೆ ಹೆಸರು ನೋಂದಾಯಿಸಿಕೊಳ್ಳದಿರಲು 41 ವರ್ಷದ ಪ್ಲೆಸಿಸ್​ ನಿರ್ಧರಿಸಿದ್ದಾರೆ. ಆದರೆ ಐಪಿಎಲ್​ ಟೂರ್ನಿ ತನ್ನ ವೃತ್ತೀಜಿವನದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ ಎಂದಿದ್ದಾರೆ.

ಅಲ್ಲದೆ ಭವಿಷ್ಯದಲ್ಲಿ ಮತ್ತೆ ಐಪಿಎಲ್​ನಲ್ಲಿ ಆಡುವ ಹಂಬಲವನ್ನೂ ವ್ಯಕ್ತಪಡಿಸಿದ್ದಾರೆ. ಐಪಿಎಲ್​ನಲ್ಲಿ ಸಿಎಸ್​ಕೆ, ಪುಣೆ, ಆರ್​ಸಿಬಿ ಪರ ಆಡಿರುವ ಪ್ಲೆಸಿಸ್​, ಕಳೆದ ಆವೃತ್ತಿಯಲ್ಲಿ ಡೆಲ್ಲಿ ತಂಡದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net