ಭಾರತದ ತಂಡದ ಈ ವೀರೋಚಿತ ಪ್ರದರ್ಶನದಿಂದ ಅಮೀರ್ ನುಡಿದಿದ್ದ ಭವಿಷ್ಯವಾಣಿ ಇದೀಗ ಸುಳ್ಳಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ಮಾಜಿ ವೇಗಿ ಅಮೀರ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಜಿಯೋ ನ್ಯೂಸ್ನಲ್ಲಿ ನಡೆದ 'ಹಾರ್ನಾ ಮನ ಹೈ' ಕಾರ್ಯಕ್ರಮದ ಚರ್ಚೆಯ ಸಂದರ್ಭದಲ್ಲಿ, ಪಾಕಿಸ್ತಾನದ ಸೆಮಿಫೈನಲ್ ಅರ್ಹತೆಯ ಬಗ್ಗೆ ಅಮೀರ್ನ ಪ್ರಶ್ನಿಸಿದಾಗ, "ದೇಖೋ, ಪಾಕಿಸ್ತಾನ ಕರೇ ನಾ ಕರೇ, ಇಂಡಿಯಾ ನಾ (ಪಾಕಿಸ್ತಾನವು ಸೆಮಿಫೈನಲ್ ತಲುದಿದ್ದರೂ ಪರವಾಗಿಲ್ಲ, ಆದರೆ ಭಾರತ ಮಾತ್ರ ಸೆಮಿಫೈನಲ್ ತಲುಪುವುದಿಲ್ಲ)" ಎಂದಿದ್ದರು. ಹಾಗಾಗಿ ಅವರ ವಿರುದ್ಧ ಈಗ ಟ್ರೋಲ್ ಮತ್ತು ವಿರೋಧಗಳು ವ್ಯಕ್ತವಾಗುತ್ತಿವೆ.