ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಕುಟುಂಬಕ್ಕೆ ಸಂಕಷ್ಟ: ಮುಂಬೈನಲ್ಲಿ ಮಾವ, ಸೋದರ ಮಾವ ಅರೆಸ್ಟ್! Yusuf Pathan

Yusuf Pathan (ಚಿತ್ರ X)
Yusuf Pathan (ಚಿತ್ರ X)
Published on
ಮುಂಬೈ: ಇಲ್ಲಿನ ಬೈಕುಲ್ಲಾ ಪ್ರದೇಶದಲ್ಲಿ ನಡೆದ ಗಲಾಟೆ ಹಾಗೂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ (Yusuf Pathan) ಅವರ ಕುಟುಂಬದ ಮೂವರು ಸದಸ್ಯರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಘಟನೆ ಏನು?

ಮುಂಬೈ ನಿವಾಸಿ ಯೂಸುಫ್​ ಖಾನ್​ ಎಂಬುವವರು ತಮ್ಮ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿದ್ದ ಗುಂಡಿಯ ಮೇಲೆ ಕಾರು ಹೋದಾಗ ಮಾಜಿ ಕ್ರಿಕೆಟಿಗನ ಸಂಬಂಧಿ ಶೋಯೆಬ್​ ಖಾನ್​ ಮೇಲೆ ಆಚಾನಕ್ಕಾಗಿ ನೀರು ಚಿಮ್ಮಿತು.
ಈ ವೇಳೆ ಯೂಸುಫ್​ ಕಾರು ನಿಲ್ಲಿಸಿ ಕ್ಷಮೆಯಾಚಿಸಲು ಮುಂದಾಗಿದ್ದಾರೆ. ಆದರೆ, ಶೋಯೆಬ್​ ಆವಾಚ್ಯ ಶಬ್ದದಲ್ಲಿ ನಿಂದಿಸುತ್ತಾ, ಬಿದಿರಿನ ಕೋಲಿನಿಂದ ಕಾರಿನ ವಿಂಡ್​ ಷೀಲ್ಡ್​ಗೆ ಹೊಡೆದು ಹಾನಿಗೊಳಿಸಿದರು. ಜೊತೆಗೆ ಯೂಸುಫ್ ಪಠಾಣ್ ಅವರ ಮಾವ ಕೂಡಾ ದೈಹಿಕ ಹಲ್ಲೆ ನಡೆಸಿದ್ದಾರೆ  ಎಂದು ಆರೋಪಿಸಲಾಗಿದೆ. 
ಮನೆಗೆ ಹಿಂದಿರುಗಿದ ನಂತರ, ಖಾನ್ ಅವರ ಸಂಬಂಧಿಕರು ದೂರು ದಾಖಲಿಸಲು ಪೊಲೀಸರನ್ನು ಸಂಪರ್ಕಿಸುವಂತೆ ಸೂಚಿಸಿದರು. ವಿಚಾರಣೆ ನಡೆಸುತ್ತಿರುವಾಗ ಖಾಲಿದ್ ಖಾನ್ ಅವರನ್ನು ಭೇಟಿಯಾದರು. ವಿಷಯವನ್ನು ಶಾಂತಯುತವಾಗಿ ಬಗೆಹರಿಸುವ ಬದಲಿಗೆ ಖಾಲಿದ್, ತಮ್ಮ ಮಗ ಉಮರ್ಷದ್ ಖಾನ್ , ಶೋಯೆಬ್ ಖಾನ್ ಮತ್ತು ಶೆಹಬಾಜ್ ಪಠಾಣ್ ಎಂಬುವವರನ್ನು ಸೇರಿಸಿಕೊಂಡು ಯೂಸುಫ್ ಖಾನ್ ಕುಟುಂಬದ ಸದಸ್ಯರೊಂದಿಗೆ ಇನ್ನಷ್ಟು ಜಗಳವಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ. 
ಪೊಲೀಸರ ಪ್ರಕಾರ, ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆ ಉಂಟಾಯಿತು. ಈ ವೇಳೆ ಯೂಸೂಫ್ ಖಾನ್ ಕುಟುಂಬಸ್ಥರ ಮೇಲೆ ಬಿದಿರಿನ ಕೋಲುಗಳು ಮತ್ತು ಬೇಸ್‌ಬಾಲ್ ಬ್ಯಾಟ್‌ಗಳಿಂದ ಹಲ್ಲೆ ನಡೆಸಿದರು. ಹಲ್ಲೆಯ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ಗಂಭೀರ ಗಾಯಗೊಂಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು 

ಈ ಘಟನೆ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಖಾಲಿದ್ ಖಾನ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದು, ನಾಲ್ಕನೇ ಆರೋಪಿಯನ್ನು ಪತ್ತೆ ಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ, ಬಿಎನ್‌ಎಸ್ ಸೆಕ್ಷನ್ 118(2), 115(2), 324, 352, 351(2) ಮತ್ತು 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 
ಬಂಧಿತ ವ್ಯಕ್ತಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಸಿಸಿಟಿವಿ ರೆಕಾರ್ಡ್​ಗಳು, ಸಾಕ್ಷಿಗಳು ನೀಡಿದ ಹೇಳಿಕೆಗಳು ಮತ್ತು ಬಿದಿರಿನ ಕೋಲುಗಳು ಮತ್ತು ಬೇಸ್‌ಬಾಲ್ ಬ್ಯಾಟ್‌ಗಳು ಸೇರಿದಂತೆ ಘಟನೆಯಲ್ಲಿ ಭಾಗಿಯಾಗಿರುವ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ನಂತರ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net