ಎಲ್ಲರಿಗೂ ಗೊತ್ತಿದೆ ಆತ... ಆರ್​ಆರ್​ ಕ್ಯಾಪ್ಟನ್​ ರಿಯಾನ್​ ಪರಾಗ್ ಮುಖಕ್ಕೆ ಹೊಡೆದಂತೆ​ ಹೇಳಿದ ಕ್ರಿಸ್ ಶ್ರಿಕಾಂತ್​

ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್
Published on

ಪ್ರಮುಖ ಮುಖ್ಯಾಂಶಗಳು

  • ಇದೇ ಮಾ.28ರಿಂದ ಐಪಿಎಲ್​ 19ನೇ ಆವೃತ್ತಿ ಆರಂಭ
  • ಐಪಿಎಲ್​ ಶುರುವಿನ ಹಿನ್ನೆಲೆ ಆರ್​ಆರ್​ ಬಗ್ಗೆ ಮಾಜಿ ಕ್ರಿಕೆಟಿಗ ಬಿಚ್ಚುನುಡಿ
  • ರಾಜಸ್ಥಾನ ರಾಯಲ್ಸ್ ನಾಯಕ ರಿಯಾನ್ ಪರಾಗ್ ಕುರಿತು ಕ್ರಿಸ್​ ಶ್ರೀಕಾಂತ್​ ಓಪನ್ ಟಾಕ್​
ನವದೆಹಲಿ: ಇದೇ ಮಾ.28ರಿಂದ ಐಪಿಎಲ್​ 19ನೇ ಆವೃತ್ತಿ ಆರಂಭವಾಗಲಿದ್ದು, ಮೊದಲ ಪಂದ್ಯವೇ ಆರ್​ಸಿಬಿ ಮತ್ತು ಎಸ್​ಆರ್​ಎಚ್​ ನಡುವೆ ನಡೆಯಲಿದೆ. ಈ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಯಾರಿಗೆ ಮೊದಲ ಗೆಲುವು ಒಲಿಯಲಿದೆ ಎಂಬುದನ್ನು ಕ್ರಿಕೆಟ್​ ಪ್ರೇಮಿಗಳು ಬಹಳ ಕಾತರದಿಂದ ಎದುರುನೋಡುತ್ತಿದ್ದಾರೆ. ಈ ಮಧ್ಯೆ, ಟೀಮ್ ಇಂಡಿಯಾದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಮಾತನಾಡಿ, ರಾಜಸ್ಥಾನ ರಾಯಲ್ಸ್ ತಂಡದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ​
ತಮ್ಮ ಯೂಟ್ಯೂಬ್ ಚಾನಲ್​ನಲ್ಲಿ ಮಾತನಾಡಿರುವ ರಿಯಾನ್ ಪರಾಗ್​, ಒಂದೊಳ್ಳೆ ಪ್ರದರ್ಶನವಿಲ್ಲ. ಸತತವಾಗಿ ತಂಡದಲ್ಲಿ ಇತರೆ ಆಟಗಾರರಿಗೆ ಉತ್ತಮ ಸಾಥ್ ನೀಡುತ್ತಿಲ್ಲ. ಆದರೂ ಸಹ ಫ್ರಾಂಚೈಸಿಯ ಕ್ಯಾಪ್ಟನ್​ ಸ್ಥಾನ ರಿಯಾನ್ ಪರಾಗ್​ಗೆ. ಅವರೆಲ್ಲ ಆತನನ್ನು ಕಿಂಗ್ ರೀತಿ ನೋಡಿಕೊಳ್ಳುತ್ತಿದ್ದಾರೆ. ತಂಡದಲ್ಲಿ ಅನುಭವಿ ಆಟಗಾರರ ನಡುವೆಯೂ ರಿಯಾನ್​ಗೆ ಫ್ರಾಂಚೈಸಿಯಿಂದ ವಿಶೇಷ ಸಪೋರ್ಟ್​ ಸಿಗುತ್ತಿದೆ ಎಂದಿದ್ದಾರೆ.  
ಎಲ್ಲರಿಗೂ ಗೊತ್ತಿದೆ ಆತ ಹೇಗೆ ರಾಜಸ್ಥಾನ ರಾಯಲ್ಸ್ ತಂಡದ ಕ್ಯಾಪ್ಟನ್ ಆಗಿದ್ದಾನೆ ಅಂತ. ಇದು ಅಂತಿಮವಾಗಿ ಫ್ರಾಂಚೈಸಿಯ ನಿರ್ಧಾರ. ಕಳೆದ ಆವೃತ್ತಿಯಲ್ಲಿ ಅವರಿಗೆ ಒಳ್ಳೆಯ ಸೀಸನ್​ ಆಗಿರಲಿಲ್ಲ. ಮುಖ್ಯವಾಗಿ, ನಾಯಕ ರಿಯಾನ್​ಗೆ. 17ನೇ ಆವೃತ್ತಿಯಲ್ಲಿ ಆಡಿದ್ದು ಬಿಟ್ಟರೆ, ಇನ್ನೆಲ್ಲಿಯೂ ಆತನಿಂದ ಉತ್ತಮ ಇನ್ನಿಂಗ್ಸ್ ಅಥವಾ ಪ್ರದರ್ಶನ ಬರಲಿಲ್ಲ ಎಂದು ಹೇಳಿದರು. 
"ಇದು ಯೋಗ್ಯ ತಂಡ. ಲೀಗ್​ ಸ್ಪರ್ಧೆಯಲ್ಲಿ ಇತರೆ ತಂಡಗಳನ್ನು ಮಣಿಸುವ ಸಾಮರ್ಥ್ಯವನ್ನು ಹೊಂದಿದೆ. ಮತ್ತೊಂದೆಡೆ, ತಮ್ಮನ್ನೇ ನಾಶ ಮಾಡಿಕೊಳ್ಳುವ ತಂಡವು ಇವರದ್ದೇ. ಟಾಪ್​ 5ರಲ್ಲಿ ಬಂದರೆ, ಎದುರಾಳಿಗೆ ಟಫ್​ ಫೈಟ್​ ಕೊಡುತ್ತಾರೆ. ತಂಡಕ್ಕೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಜೋಡಿ ದೊಡ್ಡ ಪ್ಲಸ್ ಆಗಿದೆ. ಇವರಿಬ್ಬರೇ ಪಂದ್ಯಗಳನ್ನು ಗೆಲ್ಲಿಸಿಕೊಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೂ ಇವರೇನು ಚಾಂಪಿಯನ್‌ ಪಟ್ಟ ಪಡೆಯುವ ತಂಡವಲ್ಲ. ಪ್ಲೇಆಫ್ ಅರ್ಹತೆ 50-50 ಅಷ್ಟೇ" ಎಂದು ಕುಟುಕಿ ಮಾತನಾಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net