ಲಂಡನ್: ಬ್ರೆಂಡನ್ ಮೆಕ್ಕಲಂರಿಂದ ತೆರವಾಗಿರುವ ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಕೆಲ ಅಭ್ಯರ್ಥಿಗಳನ್ನು ಪಟ್ಟಿ ಮಾಡಿದ್ದು, ಅದರಲ್ಲಿ ಐಪಿಎಲ್ನ (IPL) ಹಾಲಿ-ಮಾಜಿ ಕೋಚ್ಗಳೇ ಹೆಚ್ಚಿದ್ದಾರೆ.
ಆರ್ಸಿಬಿ ಕೋಚ್ ಆಂಡಿ ಫ್ಲವರ್, ಲಖನೌ ಕೋಚ್ ಜಸ್ಟಿನ್ ಲ್ಯಾಂಗರ್, ರಾಜಸ್ಥಾನ ಕೋಚ್ ಕುಮಾರ ಸಂಗಕ್ಕರ, ಸನ್ರೈಸರ್ಸ್ ಮಾಜಿ ಕೋಚ್ ಟಾಮ್ ಮೂಡಿ, ಸಿಎಸ್ಕೆ ಮಾಜಿ ಕೋಚ್ ಸ್ಟೀಫನ್ ಫ್ಲೆಮಿಂಗ್, ಆರ್ಸಿಬಿ ಮಾಜಿ ಕೋಚ್ ಮೈಕ್ ಹೆಸ್ಸನ್ ಈ ಪಟ್ಟಿಯಲ್ಲಿರುವ ಪ್ರಮುಖರು. ಜತೆಗೆ ಅಫ್ಘಾನಿಸ್ತಾನದ ಮಾಜಿ ಕೋಚ್ ಜೊನಾಥನ್ ಟ್ರಾಟ್, ರಿಚರ್ಡ್ ಡಾಸನ್, ಆದಿ ಬಿರೆಲ್ ಈ ಪಟ್ಟಿಯಲ್ಲಿದ್ದಾರೆ.
ಹೊಸ ಒಪ್ಪಂದದಲ್ಲಿ ಇಸಿಬಿ, ಟೆಸ್ಟ್ ತಂಡದ ಕೋಚಿಂಗ್ ಜತೆಜತೆಯಲ್ಲೇ ಐಪಿಎಲ್ ತಂಡಗಳ ತರಬೇತುದಾರರಾಗಿ ಕಾರ್ಯನಿರ್ವಹಿಸಲು ಕೂಡ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ. ಟೀಮ್ ಇಂಡಿಯಾ ಮಾಜಿ ನಾಯಕ&ಕೋಚ್ ರಾಹುಲ್ ದ್ರಾವಿಡ್ ಕೂಡ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ರೇಸ್ನಲ್ಲಿದ್ದಾರೆ ಎಂದು ವರದಿಯಾಗಿದ್ದರೂ, ಇಸಿಬಿ ಪಟ್ಟಿಯಲ್ಲಿ ಅವರ ಹೆಸರಿಲ್ಲ.