ಪರ್ತ್ ಅಖಾಡದಲ್ಲಿ ಎಲಿಸ್ ಪೆರ್ರಿ ಅಟ್ಟಹಾಸ; 20 ವರ್ಷಗಳ ಹಳೆಯ ಕರೆನ್ ರೋಲ್ಟನ್ ದಾಖಲೆ ಉಡೀಸ್​! Ellyse Perry

(ಚಿತ್ರ X)
(ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಎಲಿಸ್ ಪೆರ್ರಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 10 ನೇ ಸ್ಥಾನ ಪಡೆದಿದ್ದಾರೆ
  • ಆಸ್ಟ್ರೇಲಿಯಾದ ಕರೆನ್ ರೋಲ್ಟನ್​ರ ದೀರ್ಘಕಾಲದ ದಾಖಲೆಯನ್ನು ಮುರಿಯುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ
  • ಕ್ವಾಡ್ ಗಾಯಕ್ಕೆ ತುತ್ತಾಗಿದ್ದ ಕಾರಣ ಪೆರ್ರಿ ಭಾರತದ ವಿರುದ್ಧದ ಏಕದಿನ (ODI) ಸರಣಿಯಿಂದಲೇ ಕೈಬಿಡಲಾಗಿತ್ತು
ಪರ್ತ್: ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಎಲಿಸ್ ಪೆರ್ರಿ (Ellyse Perry) ಮಹಿಳಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 10 ನೇ ಸ್ಥಾನ ಪಡೆದಿದ್ದಾರೆ.
ಪರ್ತ್‌ನ ಐತಿಹಾಸಿಕ WACA ಮೈದಾನದಲ್ಲಿ ನಡೆದ ಭಾರತದ ವಿರುದ್ಧ ಏಕೈಕ ಟೆಸ್ಟ್ ಪಂದ್ಯದ ಎರಡನೇ ದಿನದಂದು ಪೆರ್ರಿ, ಆಸ್ಟ್ರೇಲಿಯಾದ ಕರೆನ್ ರೋಲ್ಟನ್​ರ ದೀರ್ಘಕಾಲದ ದಾಖಲೆಯನ್ನು ಮುರಿಯುವ ಮೂಲಕ ಆಸ್ಟ್ರೇಲಿಯಾ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಕ್ವಾಡ್ ಗಾಯಕ್ಕೆ ತುತ್ತಾಗಿದ್ದ ಕಾರಣ ಪೆರ್ರಿ ಭಾರತದ ವಿರುದ್ಧದ ಏಕದಿನ (ODI) ಸರಣಿಯಿಂದಲೇ ಕೈಬಿಡಲಾಗಿತ್ತು. ಅವರು ಟೆಸ್ಟ್ ಪಂದ್ಯದಲ್ಲಿ ಆಡುವುದು ಬಹುತೇಕ ಅನುಮಾನ ಎನ್ನಲಾಗಿತ್ತು. ಆದರೆ ನ್ಯೂ ಸೌತ್ ವೇಲ್ಸ್ ಮೂಲದ ಈ ದಿಟ್ಟೆ, ಛಲ ಬಿಡದೆ ಚಿಕಿತ್ಸೆ ಪಡೆದು ಸರಿಯಾದ ಸಮಯಕ್ಕೆ ಚೇತರಿಸಿಕೊಂಡರು. ತಂಡದ ಹಿತದೃಷ್ಟಿಯಿಂದ ಅವರು ಈ ಪಂದ್ಯದಲ್ಲಿ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿದು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.
ಪೆರ್ರಿ ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ ನಡುವಿನ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ 128 ರನ್​ಗಳನ್ನು ತಂದುಕೊಟ್ಟರು. ಮೊದಲ ಇನ್ನಿಂಗ್ಸ್​ನಲ್ಲಿ ಪ್ರವಾಸಿ ತಂಡವು 198 ರನ್​ಗಳಿಗೆ ಆಲ್​ ಔಟ್​ ಆಗಿ ಬ್ಯಾಟಿಂಗ್​​ನಲ್ಲಿ ತೀವ್ರವಾಗಿ ಸೆಣೆಸಾಡಿತು. ಜೆಮಿಯಾ ರೊಡ್ರಿಗಸ್ 52 ರನ್​ಗಳಿಸಿದರೆ, ಕಾಶ್ವಿ ಗೌತಮ್ 34 ರನ್ ಗಳಿಸುವ ಮೂಲಕ ತಂಡ 200 ರನ್​ಗಳ ಸಮೀಪಕ್ಕೆ ಹೋಗಲು ಸಹಾಯ ಮಾಡಿದರು.
ಪಂದ್ಯದ ಆರಂಭದಲ್ಲಿ ಆಸ್ಟ್ರೇಲಿಯಾ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಭಾರತದ ಶಿಸ್ತಿನ ಬೌಲಿಂಗ್ ದಾಳಿಗೆ ಕಂಗರೂ ಪಡೆಯ ಜೋಡಿ ತತ್ತರಿಸಿತು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಪೆರ್ರಿ ಪರಿಸ್ಥಿತಿಯನ್ನು ನಿಯಂತ್ರಿಸಿ ಆಸ್ಟ್ರೇಲಿಯಾವನ್ನು ಸಂಕಷ್ಟದಿಂದ ಪಾರು ಮಾಡಿದರು.

ಅಲಿಸಾ ಹೀಲಿ ತನ್ನ ಕೊನೆಯ ಟೆಸ್ಟ್‌ನಲ್ಲಿ ವಿಫಲರಾದರು

ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ನಾಯಕಿ ಅಲಿಸಾ ಹೀಲಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 13 ರನ್ ಗಳಿಸಿದರು. ನಂತರ 20 ನೇ ಓವರ್​ನಲ್ಲಿ ಸಯಾಲಿ ಸತ್​ಘರೆ ಅನುಭವಿ ಆಟಗಾರ್ತಿಯ ಮೇಲೆ ಮೇಲುಗೈ ಸಾಧಿಸಿದರು.
ಎಲಿಸ್ ಪೆರ್ರಿ ಅಬ್ಬರಕ್ಕೆ ಭಾರತದ ಜೆಮಿಮಾ ರೋಡ್ರಿಗಸ್ ಮರೆಯಲಾಗದ ಅಂತ್ಯ ಹಾಡಿದ್ದಾರೆ. ಶತಕದತ್ತ ನುಗ್ಗುತ್ತಿದ್ದ ಪೆರ್ರಿ, ಒಂದು ಸಣ್ಣ ತಪ್ಪು ನಿರ್ಧಾರದಿಂದಾಗಿ ವಿಕೆಟ್ ಒಪ್ಪಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net