

ಬೆಂಗಳೂರು: ಬೆಂಗಳೂರು ಎಫ್‌ಸಿ (BFC) ಡಚ್ ಸೆಂಟರ್‌ಬ್ಯಾಕ್ ಮೆನ್ನೊ ಕೊಚ್ (Menno Koch) ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿರುವುದಾಗಿ ಇಂದು ಅಧಿಕೃತವಾಗಿ ಘೋಷಿಸಿದೆ. 2026–27ರ ಇಂಡಿಯನ್ ಸೂಪರ್ ಲೀಗ್ (ISL) ಋತುವಿಗೂ ಮುನ್ನ 32 ವರ್ಷದ ಈ ಆಟಗಾರ ಬೆಂಗಳೂರಿನ ‘ಬ್ಲೂಸ್’ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.