ದುಲೀಪ್ ಟ್ರೋಫಿ: ಮೊದಲ ದಿನ ಸುದೀಪ್, ಶಾಬಾಜ್ ಶತಕ, ನಿರಾಸೆ ಮೂಡಿಸಿದ ವೈಭವ್!

ದುಲೀಪ್ ಟ್ರೋಫಿ: ಮೊದಲ ದಿನ ಸುದೀಪ್, ಶಾಬಾಜ್ ಶತಕ, ನಿರಾಸೆ ಮೂಡಿಸಿದ ವೈಭವ್!
ದುಲೀಪ್ ಟ್ರೋಫಿ: ಮೊದಲ ದಿನ ಸುದೀಪ್, ಶಾಬಾಜ್ ಶತಕ, ನಿರಾಸೆ ಮೂಡಿಸಿದ ವೈಭವ್!
Published on

ಬೆಂಗಳೂರು:

ಸುದೀಪ್ ಕುಮಾರ್ ಘರಮಿ (146 ರನ್, 185 ರನ್, 25 ಬೌಂಡರಿ, 1 ಸಿಕ್ಸರ್) ಹಾಗೂ ಆಲ್ರೌಂಡರ್ ಶಾಬಾಜ್ ಅಹ್ಮದ್ (100* ರನ್, 137 ಎಸೆತ, 9 ಬೌಂಡರಿ, 2 ಸಿಕ್ಸರ್) ಶತಕದ ನೆರವಿನಿಂದ ಪೂರ್ವ ವಲಯ ತಂಡ ಪ್ರತಿಷ್ಠಿತ ದುಲೀಪ್ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಈಶಾನ್ಯ ವಲಯ ಎದುರು ಬೃಹತ್ ಮೊತ್ತದತ್ತ ಸಾಗಿದೆ.


ಬೆಂಗಳೂರು ಹೊರವಲಯದ ಬಿಸಿಸಿಐ ಶ್ರೇಷ್ಠತಾ ಕೇಂದ್ರದ (ಸಿಒಇ) ಗ್ರೌಂಡ್-2ರಲ್ಲಿ ಭಾನುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತ ಪೂರ್ವ ವಲಯ ಬ್ಯಾಟಿಂಗ್‌ಗೆ ಇಳಿಯಿತು. ಟಿ20 ಸೆನ್ಸೇಶನ್ ವೈಭವ್ ಸೂರ್ಯವಂಶಿ (8) ನಿರಾಸೆ ಮೂಡಿಸಿದ ನಡುವೆಯೂ, ಸುದೀಪ್ ಹಾಗೂ ಶಾಬಾಜ್ ಜೋಡಿ ಆರನೇ ವಿಕೆಟ್‌ಗೆ 211 ಎಸೆತಗಳಲ್ಲಿ 150 ರನ್ ಸೇರಿಸಿತು. ಮಂದ ಬೆಳಕು ಮತ್ತು ಮಳೆಯಿಂದಾಗಿ ದಿನದಾಟದ ಅಂತ್ಯಕ್ಕೆ ಪೂರ್ವ 80 ಓವರ್‌ಗಳಲ್ಲಿ 6 ವಿಕೆಟ್‌ಗೆ 355 ರನ್‌ಗಳಿಸಿ ಮೊದಲ ದಿನದ ಗೌರವ ಸಂಪಾದಿಸಿದೆ. ಶಾಬಾಜ್ ಜತೆಗೆ ಅನುಕೂಲ್ (22*) ಮುರಿಯದ ಏಳನೇ ವಿಕೆಟ್‌ಗೆ 92 ಎಸೆತಗಳಲ್ಲಿ 67 ರನ್‌ಗಳಿಸಿ, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಪೂರ್ವ ವಲಯ: 80 ಓವರ್‌ಗಳಲ್ಲಿ 6 ವಿಕೆಟ್‌ಗೆ 355 (ಅಭಿಮನ್ಯು 15, ವೈಭವ್ 8, ಕುಶಾಗ್ರ 55, ಸುದೀಪ್ 146, ವಿರಾಟ್ 2, ಇಶಾನ್ ಕಿಶನ್ 4, ಶಾಬಾಜ್ 100*, ಅನುಕೂಲ್ 22*, ಪಿ.ಜೋಟಿನ್ 53ಕ್ಕೆ 3, ಆಕಾಶ್ 64ಕ್ಕೆ 2).

ಉತ್ತರಕ್ಕೆ ತನುಷ್, ತುಷಾರ್ ಕಡಿವಾಣ


ಯುವ ಸ್ಪಿನ್ನರ್ ತನುಷ್ ಕೋಟ್ಯಾನ್ (75ಕ್ಕೆ 4) ಹಾಗೂ ವೇಗಿ ತುಷಾರ್ ದೇಶಪಾಂಡೆ (57ಕ್ಕೆ 4) ಸಂಘಟಿತ ದಾಳಿಯ ನೆರವಿನಿಂದ ಪಶ್ಚಿಮ ವಲಯ ತಂಡ ಇನ್ನೊಂದ

ಕ್ವಾರ್ಟರ್‌ ಫೈನಲ್‌ನಲ್ಲಿ

ಉತ್ತರ ವಲಯ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದೆ.

ಬಿಸಿಸಿಐ ಶ್ರೇಷ್ಠತ ಕೇಂದ್ರದ ಗ್ರೌಂಡ್-1ರಲ್ಲಿ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಉತ್ತರ ವಲಯ, ಆಯುಷ್ ಬಡೋನಿ (51) ಹಾಗೂ ಕೆಳ ಕ್ರಮಾಂಕ ಬ್ಯಾಟರ್ ಅಂಶುಲ್ ಕಂಬೋಜ್ (60) ಅರ್ಧಶತಕಗಳ ನೆರವಿನಿಂದ 66.5 ಓವರ್‌ಗಳಲ್ಲಿ 251 ರನ್‌ಗೆ ಮೊದಲ ಇನಿಂಗ್ಸ್ ಮುಗಿಸಿತು. ಇದಕ್ಕೆ ಉತ್ತರವಾಗಿ ಪಶ್ಚಿಮ ವಲಯ ದಿನದಂತ್ಯಕ್ಕೆ 10 ಓವರ್‌ಗಳಲ್ಲಿ 2 ವಿಕೆಟ್‌ಗೆ 31 ರನಗಳಿಸಿದ್ದು, 220 ರನ್‌ಗಳ ಹಿನ್ನಡೆಯಲ್ಲಿದೆ.
ಉತ್ತರ ವಲಯ: 66.5 ಓವರ್‌ಗಳಲ್ಲಿ 251 (ಕಮ್ರಾನ್ 26, ಯಶ್ ಧುಲ್ 9, ಆಯುಷ್ 42, ಬಡೋನಿ 51, ನಿಶಾಂತ್ 15, ಅಬಿದ್ 19, ಅಂಶುಲ್ 60, ತುಷಾರ್ 57ಕ್ಕೆ 4, ತನುಷ್ 72ಕ್ಕೆ 4).
ಪಶ್ಚಿಮ: 10 ಓವರ್‌ಗಳಲ್ಲಿ 2 ವಿಕೆಟ್‌ಗೆ 31 (ಪೃಥ್ವಿ ಷಾ 22, ಹಾರ್ವಿಕ್ 3, ಮುಶೀರ್ 6*, ಅರ್ಷದೀಪ್ 19ಕ್ಕೆ 1).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net