ಭಾರತ ಟಿ20 ತಂಡದ ಉಪನಾಯಕ ತಿಲಕ್ ವರ್ಮ ದಕ್ಷಿಣ ವಲಯ ಮುನ್ನಡೆಸಲಿದ್ದು, ಆಂಧ್ರದ ರಿಕಿ ಭುಯ್ ಉಪನಾಯಕನಾಗಿ ಸಾಥ್ ನೀಡಲಿದ್ದಾರೆ. ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ದೇವದತ್ ಪಡಿಕ್ಕಲ್ ದಕ್ಷಿಣ ವಲಯದಲ್ಲಿ ಸ್ಥಾನ ಪಡೆದಿಲ್ಲ. ಆಂಡರ್‌ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ಪರ ಕೊನೆಯದಾಗಿ ಆಡಿದ್ದ 34 ವರ್ಷ ಕರುಣ್ ನಾಯರ್ ದುಲೀಪ್ ಟ್ರೋಫಿಗೆ ಸ್ಥಾನ ಪಡೆದಿರುವುದು ಅಚ್ಚರಿ ಎನಿಸಿದೆ. ಕಳೆದ ವರ್ಷದ ದೇಶೀಯ ಋತುವಿನಲ್ಲಿ ರನ್ ಮಳೆ ಸುರಿಸಿದ್ದ ಸ್ಮರಣ್ ಜತೆಗೆ ಅನುಭವಿ ಸ್ಪಿನ್ನರ್ ಶ್ರೇಯಸ್ ಗೋಪಾಲ್, ವೇಗಿ ವಿದ್ವತ್ ಕಾವೇರಪ್ಪ ತಂಡದಲ್ಲಿರುವ ಇನ್ನಿಬ್ಬರು ಕನ್ನಡಿಗರಾಗಿದ್ದಾರೆ.