ಸಹಾಯಕ ಕೋಚ್ ಹುದ್ದೆ ಬಿಟ್ಟು ಐಪಿಎಲ್‌ ಫ್ರಾಂಚೈಸಿ ಸೇರಿದ ಡೋಶ್ಚೆಟ್: ಭಾರತ ತಂಡಕ್ಕೆ ಹೊಸ ಫೀಲ್ಡಿಂಗ್ ಕೋಚ್ ನೇಮಕ!

ಸಹಾಯಕ ಕೋಚ್ ಹುದ್ದೆ ಬಿಟ್ಟು ಐಪಿಎಲ್‌ ಫ್ರಾಂಚೈಸಿ ಸೇರಿದ ಡೋಶ್ಚೆಟ್: ಭಾರತ ತಂಡಕ್ಕೆ ಹೊಸ ಫೀಲ್ಡಿಂಗ್ ಕೋಚ್ ನೇಮಕ!
ಸಹಾಯಕ ಕೋಚ್ ಹುದ್ದೆ ಬಿಟ್ಟು ಐಪಿಎಲ್‌ ಫ್ರಾಂಚೈಸಿ ಸೇರಿದ ಡೋಶ್ಚೆಟ್: ಭಾರತ ತಂಡಕ್ಕೆ ಹೊಸ ಫೀಲ್ಡಿಂಗ್ ಕೋಚ್ ನೇಮಕ!
Published on
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಕ್ತಾಯದ ಬೆನ್ನಲ್ಲೇ ಭಾರತ ತಂಡದ ಸಹಾಯಕ ಕೋಚ್ ರ‌್ಯಾನ್ ಟೆನ್ ಡೋಶ್ಚೆಟ್ ತನ್ನ ಹುದ್ದೆ ತೊರೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ಹುದ್ದೆಯ ಕಾರ್ಯಗಳ ಅಸ್ಪಷ್ಟತೆ ಜತೆಗೆ ಕುಟುಂಬಕ್ಕೆ ಹೆಚ್ಚಿನ ಸಮಯ ಮೀಸಲಿಡಲು ನಿರ್ಧರಿಸಿರುವ ರ‌್ಯಾನ್ ಟೆನ್ ಡೋಶ್ಚೆಟ್, ಕೋಲ್ಕತ ನೈಟ್‌ರೈಡರ್ಸ್‌ ಫ್ರಾಂಚೈಸಿ ಯ ಕ್ರಿಕೆಟ್ ಕಾರ್ಯತಂತ್ರ (ಸ್ಟ್ರಾಟರ್ಜಿ) ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
2024ರಿಂದ ಭಾರತ ತಂಡದ ಸಹಾಯಕ ಕೋಚ್ ಆಗಿದ್ದ ಡೋಶ್ಚೆಟ್ ಅವರ ಒಪ್ಪಂದವೂ ಜುಲೈ 10ಕ್ಕೆ ಮುಕ್ತಾಯಗೊಂಡಿದೆ. ನೆದರ್ಲೆಂಡ್‌ನ ಮಾಜಿ ಕ್ರಿಕೆಟಿಗ ಡೋಶ್ಚೆಟ್ ಕೆಕೆಆರ್ ತಂಡದ ತರಬೇತಿ ಬಳಗದ ಜತೆಯಾಗಿ ಕೆರಿಬಿಯನ್ ಪ್ರೀಮಿಯರ್ ಲೀಗ್, ಐಎಲ್‌ಟಿ20, ಎಂಎಲ್‌ಸಿ ಲೀಗ್‌ಗಳಲ್ಲಿ ನೈಟ್ ರೈಡರ್ಸ್‌ ಫ್ರಾಂಚೈಸಿಗಳ ತಂಡದ ಸಹಾಯಕ ಕೋಚ್ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಜಾಗತಿಕವಾಗಿ ನೈಟ್ ರೈಡರ್ಸ್‌ ಫ್ರಾಂಚೈಸಿ ಪ್ರತಿಭಾ ಶೋಧಾ ಜತೆಗೆ ತಂಡದ ರಚನೆ, ಕಾರ್ಯಕ್ಷಮತೆ ಹೆಚ್ಚಿಸಲು ಅವರು ನೆರವಾಗಲಿದ್ದಾರೆ. 45 ವರ್ಷದ ಡೋಶ್ಚೆಟ್ 2012, 2014ರ ಐಪಿಎಲ್ ಚಾಂಪಿಯನ್ ಕೆಕೆಆರ್ ತಂಡದ ಆಟಗಾರ ಹಾಗೂ 2023ರಲ್ಲಿ ಫೀಲ್ಡಿಂಗ್ ಕೋಚ್ ಆಗಿದ್ದರು.
ದಿಲೀಪ್ ಜತೆಗಿನ ಒಪ್ಪಂದ ಮುಕ್ತಾಯ
ಡೋಶ್ಚೆಟ್ ಜತೆಗೆ ಭಾರತ ತಂಡದ ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಜತೆಗಿನ ಒಪ್ಪಂದವನ್ನು ನವೀಕರಿಸಲು ನಿರಾಕರಿಸಿರುವ ಬಿಸಿಸಿಐ, ಅವರಿಗೆ ಗೇಟ್‌ಪಾಸ್ ನೀಡಿದೆ. ಭಾರತ ತಂಡದ ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಜತೆಗಿನ ಒಪ್ಪಂದ ಮುಕ್ತಾಯಗೊಂಡಿದ್ದು, ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಅವರಿ ಭಾರತ ತಂಡದ ತರಬೇತಿ ಬಳಗದ ಭಾಗವಾಗಿರುವುದಿಲ್ಲ ಎಂದು ವರದಿಯಾಗಿದೆ. ಕನ್ನಡಿಗ ಹಾಗೂ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ತರಬೇತಿ ಬಳಗದ ಭಾಗವಾಗಿ 2021ರಿಂದ ಭಾರತ ತಂಡ ಫೀಲ್ಡಿಂಗ್ ಕೋಚ್ ಆಗಿ ಕಳೆದ ಐದು ವರ್ಷಗಳಿಂದ ಟಿ. ದಿಲೀಪ್ ಕಾರ್ಯನಿರ್ವಹಿಸುತ್ತಿದ್ದರು.
ಇತ್ತೀಚಿನ ಸರಣಿಗಳಲ್ಲಿ ಟೀಮ್ ಇಂಡಿಯಾ ಕಳಪೆ ಫೀಲ್ಡಿಂಗ್‌ನಿಂದ ಹಲವು ಟೀಕೆ ಎದುರಿಸಿದ್ದು, ಇದರ ಪರಾಮರ್ಶೆ ನಡೆಸಿರುವ ಬಿಸಿಸಿಐ, ದಿಲೀಪ್ ಅವರೊಂದಿಗಿನ ಒಪ್ಪಂದವನ್ನು ನವೀಕರಿಸದಿರಲು ನಿರ್ಧರಿಸಿದೆ. ಟೀಮ್ ಇಂಡಿಯಾದ ಮುಂದಿನ ಫೀಲ್ಡಿಂಗ್ ಕೋಚ್ ಆಗಿ ಶುಭದೀಪ್ ಘೋಷ್ ನೇಮಕಗೊಳ್ಳುವ ಸಾಧ್ಯತೆಗಳಿವೆ. ಅಸ್ಸಾಂ 57 ವರ್ಷದ ಶುಭದೀಪ್, 17 ಪ್ರಥಮ ದರ್ಜೆ ಹಾಗೂ 17 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net