'ದಾಖಲೆಗಳ ಸರದಾರ', 'ರನ್ಮಷಿನ್', ಅಭಿಮಾನಿಗಳ ನೆಚ್ಚಿನ 'ಕಿಂಗ್', ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಮತ್ತೊಮ್ಮೆ ಮೈದಾನದಲ್ಲಿ ನೋಡಲು ಆರ್ಸಿಬಿ ಹಾಗೂ ಇತರೆ ಫ್ರಾಂಚೈಸಿಯ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಇದರೊಂದಿಗೆ ಅವರ ಅಪರೂಪದ ದಾಖಲೆ ಈ ಆವೃತ್ತಿಯಲ್ಲೇ ಈಡೇರಲಿ ಎಂದು ಆಶಿಸಿದ್ದಾರೆ. ಇನ್ನೂ 339 ರನ್ ಗಳಿಸಿದರೆ, ವಿರಾಟ್ ಐಪಿಎಲ್‌ನಲ್ಲಿ 9,000 ರನ್‌ಗಳ ಮೈಲಿಗಲ್ಲನ್ನು ತಲುಪುತ್ತಾರೆ. ಈ ಗೌರವವನ್ನು ಸಾಧಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಐಪಿಎಲ್‌ನಲ್ಲಿ ಹೊಸ ಇತಿಹಾಸ ಬರೆಯಲಿದ್ದಾರೆ.