ಪ್ರಸ್ತುತ, 19ನೇ ಐಪಿಎಲ್ ಆವೃತ್ತಿಯಲ್ಲಿ ಆರ್ಆರ್ ತಂಡಕ್ಕೆ ಅತ್ಯುತ್ತಮ ಓಪನಿಂಗ್ ಬ್ಯಾಟರ್ ಆಗಿರುವ ವೈಭವ್ ಸೂರ್ಯವಂಶಿ, ಅಂತಾರಾಷ್ಟ್ರೀಯ ಹಾಗೂ ಅನುಭವಿ ಬೌಲರ್ಗಳಿಗೆ ಮೈದಾನದಲ್ಲಿ ಬೆಂಡುತ್ತುತ್ತಿರುವ ದೃಶ್ಯಗಳನ್ನು ಕಂಡು ಅನೇಕರ ಬೆರಗಾಗಿದ್ದಾರೆ. ಕೇವಲ 15ನೇ ವಯಸ್ಸಿಗೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವ ಸೂರ್ಯವಂಶಿ, ಈಗಾಗಲೇ ಹಲವಾರು ಜಾಹೀರಾತುಗಳಿಗೆ ಸಹಿ ಮಾಡಿದ್ದಾರೆ. ಇದರಿಂದ ಅವರ ಒಟ್ಟು ಆಸ್ತಿ ಮೌಲ್ಯ ದುಪ್ಪಟ್ಟಾಗಿದೆ.