ಕ್ರಿಕೆಟ್ ಹೆಲ್ಮೆಟ್ ಹುಟ್ಟಿದ ಕಥೆಯೇ ರೋಚಕ! ಬೌನ್ಸರ್​ಗಳಿಗೆ ಬ್ರೇಕ್​ ಹಾಕಿದ್ದೇ ಬ್ಯಾಟರ್​ ಡೆನ್ನಿಸ್ ಅಮಿಸ್

ಡೆನ್ನಿಸ್​ ಅಮೀಸ್​, ಕ್ರಿಕೆಟ್​ ಹೆಲ್ಮೆಟ್​
ಡೆನ್ನಿಸ್​ ಅಮೀಸ್​, ಕ್ರಿಕೆಟ್​ ಹೆಲ್ಮೆಟ್​
Published on

ಪ್ರಮುಖ ಮುಖ್ಯಾಂಶಗಳು

  • ಬೈಕ್ ಹೆಲ್ಮೆಟ್‌ನಿಂದ ಮೂಡಿದ ಐಡಿಯಾ
  • ವೇಗಿಗಳ ಬೌನ್ಸರ್​ಗಳಿಂದ ರಕ್ಷಿಸಲು ಹೆಲ್ಮೆಟ್ ಪರಿಚಯ​
  • ಕ್ರಿಕೆಟ್‌ನಲ್ಲಿ ಹೆಲ್ಮೆಟ್ ಧರಿಸಿದ ಮೊದಲ ಆಟಗಾರ ಡೆನ್ನಿಸ್ ಅಮಿಸ್
Cricket Helmet: ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ, ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ಹೆಲ್ಮೆಟ್ ಇಲ್ಲದೆ ಅಖಾಡಕ್ಕೆ ಇಳಿಯಲು ಸ್ವಲ್ಪ ಯೋಚನೆ ಮಾಡುತ್ತಾರೆ. ಕಾರಣ, 140ರಿಂದ 150 ವೇಗದಲ್ಲಿ ಬರುವ ಬಾಲ್​ಗಳು, ತಲೆ ಮುಖದಂತಹ ಸೂಕ್ಷ್ಮ ಜಾಗಗಳಿಗೆ ಬಿದ್ದು ಜೀವಕ್ಕೆ ಕುತ್ತು ತರಲಿದೆ ಎಂಬ ಭಯ. ಅಷ್ಟಕ್ಕೂ ಈ ಹೆಲ್ಮೆಟ್ ಕಂಡುಹಿಡಿದವರು ಯಾರು? ಇದು ಹುಟ್ಟಿದ ಕಥೆಯೇನು? ಎಂಬುದರ ಮಾಹಿತಿ ಇಲ್ಲಿದೆ ನೋಡಿ. ​
ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಡೆನ್ನಿಸ್ ಅಮಿಸ್ ಕ್ರಿಕೆಟ್ ಇತಿಹಾಸದಲ್ಲಿ ಹೆಲ್ಮೆಟ್ ಧರಿಸಿ ಬ್ಯಾಟಿಂಗ್ ಮಾಡಿದ ಮೊದಲ ಆಟಗಾರ ಎಂದೇ ಹೆಸರುವಾಸಿ. ತಮ್ಮ ಕಾಲದಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ಡೆನ್ನಿಸ್​, ಬ್ಯಾಟಿಂಗ್ ಮಾಡುವಾಗ ಬೌಲರ್‌ಗಳು ಎಸೆದ ಚೆಂಡುಗಳು ತಲೆಗೆ ಬಡಿದರೆ ಏನು ಗತಿ? ಎಂದು ಭಾರಿ ಯೋಚಿಸಿದರು. ಅದೇ ಸಮಯದಲ್ಲಿ, ತಮ್ಮ ತಂಡದ ಸಹ ಆಟಗಾರ ಟೋನಿ ಗ್ರೆಗ್ ಅವರೊಂದಿಗೆ ಮಾತನಾಡುವಾಗ, ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಬೈಕ್ ಓಡಿಸಿಕೊಂಡು ಹೋಗುವಾಗ ಹೆಲ್ಮೆಟ್ ಧರಿಸಿದ್ದರು. ಇದನ್ನು ನೋಡಿದ ಅವರು, ನಾವ್ಯಾಕೆ ಕ್ರಿಕೆಟ್​ಗೆ ಆ ರೀತಿಯಲ್ಲಿ ಹೆಲ್ಮೆಟ್​ ತಯಾರಿಸಬಾರದು ಎಂದು ನಿರ್ಧರಿಸಿದರು. ಇಲ್ಲೇ ಹುಟ್ಟಿದ್ದು ರೋಚಕ ಕಥೆ.
ಬೈಕ್ ಸವಾರರ ಸುರಕ್ಷತೆಗಾಗಿ ಹೆಲ್ಮೆಟ್‌ಗಳು ಹೇಗೆ ಬಳಕೆಯಲ್ಲಿದೆಯೋ, ಅಂತೆಯೇ ವೇಗಿಗಳ ಬೌನ್ಸರ್​ಗಳಿಂದ ಬಚಾವ್ ಆಗಲು ಬ್ಯಾಟ್ಸ್‌ಮನ್‌ಗಳಿಗೂ ಹೆಲ್ಮೆಟ್‌ಗಳು ಅಗತ್ಯವೆಂದು ಅಮಿಸ್ ಬಲವಾಗಿ ನಂಬಿದರು. ಇದು ಹೆಲ್ಮೆಟ್ ಪ್ರಸ್ತಾವನೆಯ ಅನುಮೋದನೆಗೆ ಕಾರಣವಾಯಿತು. ಅಂದಿನಿಂದ ಇಂದಿನವರೆಗೂ ಕ್ರಿಕೆಟ್​ ಆಡುವ ಬ್ಯಾಟರ್​ಗಳು ಮತ್ತು ವಿಕೆಟ್​ ಕೀಪರ್​ಗಳು ಹೆಲ್ಮೆಟ್​ ಅನ್ನು ಕಡ್ಡಾಯವಾಗಿ ಧರಿಸುತ್ತಾರೆ.
ಡೆನ್ನಿಸ್ ಅಮಿಸ್ ಒಬ್ಬ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟರ್​. ಅವರು ಇಂಗ್ಲೆಂಡ್ ಪರ 50 ಟೆಸ್ಟ್ ಪಂದ್ಯಗಳಲ್ಲಿ 11 ಶತಕ, 11 ಅರ್ಧಶತಕಗಳು ಸೇರಿ ಒಟ್ಟು 3612 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ಅವರ ಅತ್ಯಧಿಕ ಸ್ಕೋರ್ ಅಜೇಯ 263 ರನ್​. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಅವರು 859 ರನ್‌ ಗಳಿಸಿದ್ದು, ನಾಲ್ಕು ಶತಕಗಳನ್ನು ದಾಖಲಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net