ಈ ಪಾಲುದಾರಿಕೆಯ ಭಾಗವಾಗಿ, IIS ನ ಹೈ ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ 45-ಮೀಟರ್ ಉದ್ದದ 'ಫೆಲ್ಡ್‌ಸ್ಪಾರ್ ಸ್ಮಾರ್ಟ್ ಸರ್ಫೇಸ್ ಟ್ರ್ಯಾಕ್' ಅನ್ನು ಸ್ಥಾಪಿಸಲಾಗುತ್ತಿದೆ. ಈ ಟ್ರ್ಯಾಕ್‌ನಲ್ಲಿ ಅತ್ಯಾಧುನಿಕ ಸೆನ್ಸಾರ್ ಗಳಿದ್ದು, ಕ್ರೀಡಾಪಟುಗಳು ಓಡುವಾಗ ಅವರ ಪ್ರತಿಯೊಂದು ಹೆಜ್ಜೆಯನ್ನೂ ಇದು ಗಮನಿಸುತ್ತದೆ. ಎಷ್ಟು ಬಲದಿಂದ ಓಡುತ್ತಿದ್ದಾರೆ, ವೇಗವೆಷ್ಟು, ಹೆಜ್ಜೆ ಹಾಕುವ ಸ್ಟೈಲ್ ಹೇಗಿದೆ – ಹೀಗೆ ಪ್ರತಿಯೊಂದು ಮಾಹಿತಿಯೂ ತಕ್ಷಣವೇ ಸಿಗುತ್ತದೆ. ಇದರಿಂದ ತರಬೇತುದಾರರಿಗೆ ಕ್ರೀಡಾಪಟುವಿನ ಸಾಮರ್ಥ್ಯವನ್ನು ಪರೀಕ್ಷಿಸಲು ಮತ್ತು ತಪ್ಪುಗಳನ್ನು ಸರಿಪಡಿಸಲು ತುಂಬಾ ಸುಲಭವಾಗಲಿದೆ.