ಈ ಪಂದ್ಯವನ್ನು ಬಹಳ ಗಂಭೀರವಾಗಿ ನೋಡುತ್ತಿದ್ದ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ಅಭಿಮಾನಿಗಳು, ಎಂದಿನಂತೆ ತಮ್ಮ ನೆಚ್ಚಿನ ತಂಡಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ದ್ವಿತೀಯ ಇನ್ನಿಂಗ್ಸ್ನ 15ನೇ ಓವರ್ನಲ್ಲಿ ಮುಂಬೈ ಇಂಡಿಯನ್ಸ್ ಫ್ಯಾನ್ಸ್ಗೆ ಗೆಲುವಿನ ಭರವಸೆ ಹೋಯಿತು. ಹೀಗಾಗಿ, ಬಹಳ ಬೇಸರದಿಂದ ಕುಳಿತಿದ್ದರು. ಆದರೆ, ಇಲ್ಲೊಬ್ಬ ಅಪ್ಪಟ ಮುಂಬೈ ಅಭಿಮಾನಿ, ತನ್ನ ಆರ್‌ಸಿಬಿ ಜೆರ್ಸಿ ಧರಿಸಿದ್ದ ಸ್ನೇಹಿತನೊಂದಿಗೆ ಕುಳಿತು, ಮುಖಕ್ಕೆ ಗ್ಲೋಯಿಂಗ್ ಮಾಸ್ಕ್ ಹಚ್ಚಿಕೊಳ್ಳುತ್ತಿರುವುದು ಮತ್ತೊಬ್ಬರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.