ಮಹಿಕಾ ಶರ್ಮ ಜೊತೆ ಗುಟ್ಟಾಗಿ ಮದುವೆ? ವೈರಲ್​ ಫೋಟೋ ಹೇಳ್ತಿದೆ ಹಾರ್ದಿಕ್​ ಪಾಂಡ್ಯ ಹೊಸ ಕಥೆ

ವೈರಲ್​ ಆದ ಹಾರ್ದಿಕ್​-ಮಹಿಕಾ ಫೋಟೋ
ವೈರಲ್​ ಆದ ಹಾರ್ದಿಕ್​-ಮಹಿಕಾ ಫೋಟೋ
Published on

ಪ್ರಮುಖ ಮುಖ್ಯಾಂಶಗಳು

  • ಹಾರ್ದಿಕ್​ ಪಾಂಡ್ಯ ಮತ್ತು ಪ್ರೇಯಸಿ ಮಹಿಕಾ ಶರ್ಮಾ ಗುಟ್ಟಾಗಿ ಮದುವೆ?
  • ವೈರಲ್​ ಫೋಟೋದಲ್ಲಿ ಮದುವೆಯಾದಂತೆ ಕಾಣಿಸಿದ ಸ್ಟಾರ್​ ಜೋಡಿ
Hardik Pandya: ಐರ್ಲೆಂಡ್​ ಮತ್ತು ಇಂಗ್ಲೆಂಡ್​ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯ ತಂಡಗಳಲ್ಲಿ ಅವಕಾಶ ಪಡೆಯದ ಹಾರ್ದಿಕ್​ ಪಾಂಡ್ಯ, ಕಳೆದ ಐಪಿಎಲ್​ನಿಂದ ಅದ್ಯಾಕೋ ವಿಪರೀತ ಬ್ಯಾಡ್​ ಲಕ್​ಗಳನ್ನು ಎದುರಿಸುತ್ತಿದ್ದಾರೆ. ಯಾರ ಕಣ್ಣಿಗೂ ಬೀಳದಂತೆ ಸುಮ್ಮನಿದ್ದ ಹಾರ್ದಿಕ್​, ಇದೀಗ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಪ್ರೇಯಸಿ ಮಹಿಕಾ ಶರ್ಮ ಜೊತೆಗಿನ ಫೋಟೋದಿಂದ ಮುನ್ನೆಲೆಗೆ ಬಂದಿದ್ದಾರೆ.     
ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋವನ್ನು ಗಮನಿಸಿದರೆ, ಅದರಲ್ಲಿ ಹಾರ್ದಿಕ್ ಮತ್ತು ಮಹಿಕಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದರಲ್ಲಿ, ಕುತೂಹಲ ಕೆರಳಿಸುತ್ತಿರುವುದು ಮಹಿಕಾ ಹಣೆಯ ಮೇಲಿರುವ ಸಿಂಧೂರ. ಈ ಫೋಟೋ ಹೊರಬೀಳುತ್ತಿದ್ದಂತೆ ನೆಟ್ಟಿಗರು ಇಬ್ಬರಿಗೂ ಮದುವೆಯಾಗಿದೆ. ಹೀಗಾಗಿ, ಗುರು ಹಿರಿಯರ ಆರ್ಶಿವಾದ ಪಡೆದಿದ್ದಾರೆ. ಮತ್ತು ಮಹಿಕಾರನ್ನು ನೋಡಿದ್ರೆ, ಇಬ್ಬರಿಗೂ ವಿವಾಹವಾದಂತೆ ಕಾಣಿಸುತ್ತಿದೆ ಎಂದು ಊಹಿಸಿದ್ದಾರೆ. 

ನಿಜಕ್ಕೂ ಗುಟ್ಟಾಗಿ ಮದುವೆಯಾದ್ರಾ?

ಅಸಲಿಗೆ, ಹಾರ್ದಿಕ್​ ಪಾಂಡ್ಯ ಅಥವಾ ಮಹಿಕಾ ಆಗಲಿ, ಎಲ್ಲಿಯೂ ಅಧಿಕೃತವಾಗಿ ಈ ಫೋಟೋವನ್ನು ಹಂಚಿಕೊಂಡಿಲ್ಲ. ಇದು ಕೇವಲ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್​ ಆಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದೊಂದು ಎಐ ಟೆಕ್ನಾಲಜಿ ಸಹಾಯದಿಂದ ಸೃಷ್ಟಿಸಿರುವ ಫೋಟೋವೋ ಇರಬಹುದು. 

ಪಾಂಡ್ಯ-ಮಹಿಕಾ ಲವ್​ ಸ್ಟೋರಿ

ಹಾರ್ದಿಕ್ ಪಾಂಡ್ಯ ಮತ್ತು ಮಾಹಿಕಾ ಶರ್ಮಾ ಮೊದಲ ಬಾರಿಗೆ ಅಕ್ಟೋಬರ್ 2025ರಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಮರುದಿನವೇ ಇವರ ಡೇಟಿಂಗ್ ವದಂತಿಗಳು ಕಾಡ್ಗಿಚ್ಚಿನಂತೆ ಜಾಲತಾಣಗಳಲ್ಲಿ ಹಬ್ಬಿತು. ಹಾರ್ದಿಕ್​ ತನ್ನ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ಬೆನ್ನಲ್ಲೇ ಇವರಿಬ್ಬರ ನಡುವಿನ ಲವ್ವಿ-ಡವ್ವಿ ಬೆಳಕಿಗೆ ಬಂದಿತು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net