ಭಾರತ ವಿರುದ್ಧ ಟೆಸ್ಟ್​ ಸರಣಿಗೆ ಲಂಕಾ ತಂಡ ಪ್ರಕಟ: 3 ವರ್ಷಗಳ ಬಳಿಕ ಮರಳಿದ ಡಿಕ್​ವೆಲ್ಲಾ

ಭಾರತ ವಿರುದ್ಧ ಟೆಸ್ಟ್​ ಸರಣಿಗೆ ಲಂಕಾ ತಂಡ ಪ್ರಕಟ: 3 ವರ್ಷಗಳ ಬಳಿಕ ಮರಳಿದ ಡಿಕ್​ವೆಲ್ಲಾ
ಭಾರತ ವಿರುದ್ಧ ಟೆಸ್ಟ್​ ಸರಣಿಗೆ ಲಂಕಾ ತಂಡ ಪ್ರಕಟ: 3 ವರ್ಷಗಳ ಬಳಿಕ ಮರಳಿದ ಡಿಕ್​ವೆಲ್ಲಾ
Published on

ಕೊಲಂಬೊ: ಮುಂಬರುವ ಭಾರತ ವಿರುದ್ಧದ ಟೆಸ್ಟ್​ ಸರಣಿಗೆ 16 ಆಟಗಾರರ ಆತಿಥೇಯ ಶ್ರೀಲಂಕಾ ತಂಡವನ್ನು ಬುಧವಾರ ಪ್ರಕಟಿಸಲಾಗಿದ್ದು, ಅನುಭವಿ ವಿಕೆಟ್​ ಕೀಪರ್​-ಬ್ಯಾಟರ್​ ನಿರೋಶನ್​ ಡಿಕ್​ವೆಲ್ಲಾ (

Niroshan Dickwella

) ಮೂರು ವರ್ಷಗಳ ಬಳಿಕ ರೆಡ್​ಬಾಲ್​ ತಂಡಕ್ಕೆ ಮರಳಿದ್ದಾರೆ.


33 ವರ್ಷದ ಡಿಕ್​ವೆಲ್ಲಾ 2023ರಲ್ಲಿ ನ್ಯೂಜಿಲೆಂಡ್​ ಎದುರು ಕೊನೆಯದಾಗಿ ಟೆಸ್ಟ್​ ಆಡಿದ್ದರು. ಮೊದಲ ಆದ್ಯತೆಯ ಕೀಪರ್​ ಕುಸಲ್​ ಮೆಂಡಿಸ್​ ಗಾಯದಿಂದ ಅಲಭ್ಯರಾಗಿರುವುದರಿಂದ ಡಿಕ್​ವೆಲ್ಲಾ ಪುನರಾಗಮನ ಅವಕಾಶ ಪಡೆದಿದ್ದಾರೆ. ಆಫ್​ ಸ್ಪಿನ್ನರ್​ ಕೇಶರ ನುವಾಂತ ಮತ್ತು ಬ್ಯಾಟರ್​ ಪಸಿಂದು ಸೂರಿಯಬಂದರ ತಂಡ ಸೇರಿರುವ ಹೊಸಮುಖಗಳಾಗಿದ್ದಾರೆ. 3 ವರ್ಷಗಳ ಹಿಂದೆ ಏಕೈಕ ಟೆಸ್ಟ್​ ಆಡಿದ್ದ ಎಡಗೈ ವೇಗಿ ದಿಲ್ಶನ್​ ಮಧುಶಂಕ ಕೂಡ ತಂಡಕ್ಕೆ ಮರಳಿದ್ದಾರೆ.

ಲಂಕಾ ತಂಡ: ಧನಂಜಯ ಡಿಸಿಲ್ವ (ನಾಯಕ), ಲಹಿರು ಉದರ, ನಿಶಾನ್​ ಮದುಷ್ಕ, ಕಮಿಂದು ಮೆಂಡಿಸ್​, ದಿನೇಶ್​ ಚಾಂಡಿಮಲ್​, ಪಸಿಂದು ಸೂರಿಯಬಂದರ, ಸೋನಲ್​ ದಿನುಷಾ, ನಿರೋಶನ್​ ಡಿಕ್​ವೆಲ್ಲಾ, ರಮೇಶ್​ ಮೆಂಡಿಸ್​, ಪ್ರಭಾತ್​ ಜಯಸೂರ್ಯ, ಕೇಶರ ನುವಾಂತ, ಮಿಲಾನ್​ ರತ್ನಾಯಕೆ, ಅಸಿತಾ ಫೆರ್ನಾಂಡೊ, ಲಹಿರು ಕುಮಾರ, ವಿಶ್ವ ಫೆರ್ನಾಂಡೊ, ದಿಲ್ಶನ್​ ಮಧುಶಂಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net