2012 ರಿಂದ 2025 ರವರೆಗೆ (ತಂಡ ನಿಷೇಧಕ್ಕೊಳಗಾದ ಎರಡು ವರ್ಷ ಹೊರತುಪಡಿಸಿ) ಸಿಎಸ್‌ಕೆಯ ಬೆನ್ನೆಲುಬಾಗಿ ನಿಂತಿದ್ದ ಜಡೇಜಾ, ಈಗ ರಾಜಸ್ಥಾನ್ ರಾಯಲ್ಸ್ ಜರ್ಸಿಯಲ್ಲಿ ಹಳದಿ ಪಡೆಯ ವಿರುದ್ಧವೇ ಕಣಕ್ಕಿಳಿದಿರುವುದು ಅಭಿಮಾನಿಗಳಿಗೆ ವಿಚಿತ್ರವಾಗಿ ಕಂಡಿತು. 2018, 2021 ಮತ್ತು 2023ರ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಡೇಜಾ, ನಿನ್ನೆ ಬೌಲಿಂಗ್‌ನಲ್ಲಿ ಕೆಂಡ ಉಗುಳಿದರು. ಕೇವಲ 18 ರನ್ ನೀಡಿ 2 ಪ್ರಮುಖ ವಿಕೆಟ್ (ಸರ್ಫರಾಜ್ ಖಾನ್ ಮತ್ತು ಶಿವಂ ದುಬೆ) ಪಡೆಯುವ ಮೂಲಕ ತಮ್ಮ ಆಲ್ ರೌಂಡ್ ಪ್ರತಿಭೆಯನ್ನು ಸಾಬೀತುಪಡಿಸಿದರು. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸಿಎಸ್‌ಕೆ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.