ಧೋನಿ ಈ ಬಾರಿ ಐಪಿಎಲ್​ನಲ್ಲಿ ಸಿಎಸ್​ಕೆ ಪರ ಎಲ್ಲ ಪಂದ್ಯ ಆಡುವುದು ಡೌಟ್​!

ಧೋನಿ ಈ ಬಾರಿ ಐಪಿಎಲ್​ನಲ್ಲಿ ಸಿಎಸ್​ಕೆ ಪರ ಎಲ್ಲ ಪಂದ್ಯ ಆಡುವುದು ಡೌಟ್​!
ಧೋನಿ ಈ ಬಾರಿ ಐಪಿಎಲ್​ನಲ್ಲಿ ಸಿಎಸ್​ಕೆ ಪರ ಎಲ್ಲ ಪಂದ್ಯ ಆಡುವುದು ಡೌಟ್​!
Published on
ಅಹಮದಾಬಾದ್​: ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ವಿಕೆಟ್​ ಕೀಪರ್​-ಬ್ಯಾಟರ್​ ಎಂಎಸ್​ ಧೋನಿ (MS Dhoni) ಮುಂಬರುವ ಐಪಿಎಲ್​ನಲ್ಲಿ (IPL) ಚೆನ್ನೈ ಸೂಪರ್​ಕಿಂಗ್ಸ್​ (Chennai Super Kings) ತಂಡದ ಪರ ಆಡಲು ಲಭ್ಯರಿದ್ದಾರೆ. ಆದರೆ ಅವರು ಟೂರ್ನಿಯ ಎಲ್ಲ ಪಂದ್ಯಗಳಲ್ಲಿ ಕಣಕ್ಕಿಳಿಯುವುದು ಅನುಮಾನವೆನಿಸಿದೆ ಎಂದು ವರದಿಯಾಗಿದೆ.
ಧೋನಿ ಮುಂದಿನ ಜುಲೈನಲ್ಲಿ 45ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಐಪಿಎಲ್​ 19ನೇ ಆವೃತ್ತಿಗೆ ಲಭ್ಯವಿರುವುದನ್ನು ಧೋನಿ ಈಗಾಗಲೆ ಖಚಿತಪಡಿಸಿದ್ದಾರೆ. ಆದರೆ ಕೇರಳದ ವಿಕೆಟ್​ ಕೀಪರ್​-ಬ್ಯಾಟರ್​ ಸಂಜು ಸ್ಯಾಮ್ಸನ್​ ರಾಜಸ್ಥಾನ ರಾಯಲ್ಸ್​ನಿಂದ ಸಿಎಸ್​ಕೆಗೆ ವರ್ಗಾವಣೆಗೊಂಡಿರುವುದರಿಂದ ಧೋನಿ ಎಲ್ಲ 14 ಲೀಗ್​ ಪಂದ್ಯಗಳಲ್ಲೂ ಆಡುವ ಸಾಧ್ಯತೆ ಇಲ್ಲ. ಧೋನಿ ಎಲ್ಲ ಪಂದ್ಯಗಳಲ್ಲಿ ಆಡುವ ಬಗ್ಗೆ ಈಗಲೇ ಖಾತ್ರಿ ನೀಡಲಾಗದು ಎಂದು ಸಿಎಸ್​ಕೆ ಮೂಲಗಳು ತಿಳಿಸಿವೆ.

ಸಿಎಸ್​ಕೆ ಸದ್ಯ ಮೂವರು ವಿಕೆಟ್​ ಕೀಪರ್​ಗಳನ್ನು ಹೊಂದಿದೆ. ಧೋನಿ, ಸ್ಯಾಮ್ಸನ್​ ಜತೆಗೆ ಊರ್ವಿಲ್​ ಪಟೇಲ್​ ಕೂಡ ಕೀಪರ್​ ಆಗಿದ್ದಾರೆ. ಧೋನಿ ಮೊಣಕಾಲು ಮತ್ತು ಬೆನ್ನುನೋವಿನ ಸಮಸ್ಯೆ ಹೊಂದಿದ್ದು, ಈಗಿನ ವಯಸ್ಸಿನಲ್ಲಿ ವಿಕೆಟ್​ ಕೀಪಿಂಗ್​ ನಿರ್ವಹಿಸುವುದು ಕಠಿಣ ಸವಾಲೆನಿಸಲಿದೆ. ಆದರೆ ಧೋನಿ ಚೆನ್ನೈನಲ್ಲಿ ಸಿಎಸ್​ಕೆ ಪರ ಹೆಚ್ಚಿನ ಪಂದ್ಯಗಳಲ್ಲಿ ಆಡಬಹುದು ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net