ಶನಿವಾರ ನಡೆದ ಡಬಲ್ಸ್ ಪಂದ್ಯದಲ್ಲಿ ಅನುಭವಿ ಎನ್. ಶ್ರೀರಾಮ್ ಬಾಲಾಜಿ ಜತೆಯಾಗಿ ಯುವ ತಾರೆ ದಕ್ಷಿಣೇಶ್ವರ್ ಸುರೇಶ್ ಕಣಕ್ಕಿಳಿದರು. ನಿರ್ಣಾಯಕ ಪಂದ್ಯದಲ್ಲಿ ಎನ್. ಶ್ರೀರಾಮ್ ಬಾಲಾಜಿ-ದಕ್ಷಿಣೇಶ್ವರ್ ಸುರೇಶ್ 6-3, 3-6, 6-3 ರಿಂದ ಹುಯಿ ಸುಂಗ್ ಪರ್ಕ್-ಜಿಸುಂಗ್ ನಮ್ ಜೋಡಿ ಎದುರು ಗೆಲುವು ದಾಖಲಿಸಿತು. 1 ಗಂಟೆ 44 ನಿಮಿಷ ನಡೆದ ಮೂರು ಸೆಟ್‌ನಲ್ಲಿ ಮೇಲುಗೈ ಸಾಧಿಸಿದ ಶ್ರೀರಾಮ್ ಬಾಲಾಜಿ-ದಕ್ಷಿಣೇಶ್ವರ್ ಸುರೇಶ್ ಭಾರತದ ಆಸೆ ಜೀವಂತವಿರಿಸಿದರು.