ಶನಿವಾರ ನಡೆಯಲಿರುವ ಡಬಲ್ಸ್ ಪಂದ್ಯ ಭಾರತದ ಪಾಲಿಗೆ ನಿರ್ಣಾಯಕವಾಗಿದ್ದು, ಅನುಭವಿ ಎನ್. ಶ್ರೀರಾಮ್ ಬಾಲಾಜಿ-ನಿಕಿ ಪೂಣಚ ಜತೆಯಾಗಿ ಆಡಲಿದ್ದಾರೆ. ಭಾರತ ಉಳಿದಿರುವ ಮೂರು ಪಂದ್ಯಗಳಲ್ಲಿ ಗೆದ್ದರಷ್ಟೇ, 1996ರ ಡೇವಿಸ್ ಕಪ್ ಕ್ವಾರ್ಟರ್ಫೈನಲ್ಗೇರಬಹುದಾಗಿದೆ. 2010, 2018ರಲ್ಲಿ ಕ್ರಮವಾಗಿ ಬ್ರೆಜಿಲ್, ಚೀನಾ ಎದುರು 0-2 ಹಿನ್ನಡೆಯ ನಡುವೆಯೂ ಪುಟಿದೆದ್ದು ಗೆಲುವು ಕಂಡಿರುವ ಭಾರತ ಅದೇ ಸಾಧನೆ ಪುನರಾವರ್ತಿಸುವ ಅನಿವಾರ್ಯತೆಯಲ್ಲಿದೆ.