ಹೌದು, ಪ್ರಸಿದ್ಧ ಕೃಷ್ಣ ಎಸೆದ ಕೊನೆಯ ಓವರ್‌ನಲ್ಲಿ ಎರಡು ಎಸೆತಗಳಲ್ಲಿ ಎರಡು ರನ್ಗಳ ಅವಶ್ಯಕತೆ ಇತ್ತು. ಐದನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಅವಕಾಶ ಡೇವಿಡ್ ಮಿಲ್ಲರ್ಗೆ ಸಿಕ್ಕಿತು. ಆದರೂ, ರನ್ ತೆಗೆದುಕೊಳ್ಳದೇ ಪಂದ್ಯವನ್ನು ತಾವೇ ಮುಗಿಸುವ ಭರವಸೆ ಇಟ್ಟುಕೊಂಡಿದ್ದರು. ಆದರೆ, ಆ ಭರವಸೆ ಹುಸಿಯಾಯಿತು. ಕೊನೆಯ ಎಸೆತದಲ್ಲಿ 2 ರನ್ ಬೇಕಿದ್ದಾಗ ಪ್ರಸಿದ್ಧ ಕೃಷ್ಣ ಅವರು ಸ್ಲೌ ಬೌನ್ಸರ್ ಹಾಕಿದರು. ಇದರಿಂದ ಗೊಂದಲಕ್ಕೆ ಒಳಗಾದ ಮಿಲ್ಲರ್, ಆ ಚೆಂಡನ್ನು ಮಿಸ್ ಮಾಡಿದರು. ಈ ವೇಳೆ ಬೈ ರನ್ ಪಡೆಯುವ ಪ್ರಯತ್ನದಲ್ಲಿ ಓಡಿದರು. ಆದರೆ, ಕೀಪರ್ ಜೋಸ್ ಬಟ್ಲರ್ ನಾನ್-ಸ್ಟ್ರೈಕರ್ನಲ್ಲಿದ್ದ ವಿಪ್ರಜ್ ನಿಗಮ್ ಅವರನ್ನು ರನೌಟ್ ಮಾಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 209 ರನ್ ಗಳಿಗೆ ಸೀಮಿತಗೊಳಿಸಿದರು.