ಆರ್. ವಿನಯ್ ಕುಮಾರ್ ತಮ್ಮ ಆಟದ ಜೀವನದಲ್ಲಿ ಭಾರತದ ಪರ 1 ಟೆಸ್ಟ್, 31 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲದೆ ಐಪಿಎಲ್‌ನಲ್ಲಿ ಆರ್ಸಿಬಿ, ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕೊಚ್ಚಿ ಟಸ್ಕರ್ಸ್ ಪರ ಒಟ್ಟು 105 ಪಂದಳನ್ನಾಡಿ ಸೈ ಎನಿಸಿಕೊಂಡಿದ್ದಾರೆ. 2021ರಲ್ಲಿ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಬಳಿಕ, ಮುಂಬೈ ಇಂಡಿಯನ್ಸ್ ತಂಡಕ್ಕೆ ಟ್ಯಾಲೆಂಟ್ ಸ್ಕೌಟ್ ಆಗಿ, ಕಾಮೆಂಟೇಟರ್ ಆಗಿ ಹಾಗೂ ಎಂಐ ಎಮಿರೇಟ್ಸ್ ಬೌಲಿಂಗ್ ಕೋಚ್ ಆಗಿ ಅನುಭವ ಸಂಪಾದಿಸಿದ್ದಾರೆ.