ವೈಭವ್​ ಕಂಡರೆ ನನಗೂ ಇಷ್ಟ! ಆದ್ರೆ... ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್​ ವಿರುದ್ಧ ಡ್ಯಾರಿಲ್ ಕುಲ್ಲಿನನ್ ಕಿಡಿ

ವೈಭವ್ ಸೂರ್ಯವಂಶಿ,  ಡ್ಯಾರಿಲ್ ಕುಲ್ಲಿನನ್
ವೈಭವ್ ಸೂರ್ಯವಂಶಿ, ಡ್ಯಾರಿಲ್ ಕುಲ್ಲಿನನ್
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಲಂಕಾ ಎ ವಿರುದ್ಧದ ಫೈನಲ್​ನಲ್ಲಿ ವೈಭವ್ ಸೂರ್ಯವಂಶಿ ಸ್ಫೋಟಕ ಇನ್ನಿಂಗ್ಸ್
  • 15 ವರ್ಷಕ್ಕೆ ಅಮೋಘ ಬ್ಯಾಟಿಂಗ್ ಪ್ರದರ್ಶನಕ್ಕೆ ಕ್ರಿಕೆಟ್​ ಪ್ರೇಮಿಗಳು ಫಿದಾ
  • ಯುವ ಬ್ಯಾಟರ್​ನ ಇಂಜುರಿ ಸಮಸ್ಯೆಗಳ ಬಗ್ಗೆ ಯಾರೂ ಏಕೆ ಮಾತಾಡ್ತಿಲ್ಲ?
Vaibhav Sooryavanshi: ಶ್ರೀಲಂಕಾ ವಿರುದ್ಧ ತ್ರಿಕೋನ ಸರಣಿಯ ಗೆದ್ದು ಬೀಗಿದ ಭಾರತ ಎ ತಂಡದ ಪರ ಫೈನಲ್​ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್​ ಟೀಮ್​ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಕೇವಲ 29 ಎಸೆತದಲ್ಲಿ 94 ರನ್​ ಸಿಡಿಸಿದ ವಂಡರ್​ ಕಿಡ್​ಗೆ ಕ್ರಿಕೆಟ್​ ಜಗತ್ತಿನಿಂದ ಮೆಚ್ಚುಗೆ, ಪ್ರಶಂಸೆಗಳು ಹರಿದುಬರುತ್ತಿವೆ. ಇದೇ ಸಮಯದಲ್ಲಿ, ಮಾಜಿ ಸೌತ್​ ಆಫ್ರಿಕಾ ಕ್ರಿಕೆಟಿಗ ಬೇಸರ ಹೊರಹಾಕಿದ್ದಾರೆ.
ವೈಭವ್ ಅಮೋಘ ಬ್ಯಾಟಿಂಗ್‌ ನೆರವಿನಿಂದ ಭಾರತ ಎ ತಂಡ 379 ರನ್ ಗಳಿಸಿ ಫೈನಲ್‌ನಲ್ಲಿ 66 ರನ್‌ಗಳಿಂದ ಭರ್ಜರಿ ಜಯಗಳಿಸಿತು. 8 ಸಿಕ್ಸರ್‌ ಮತ್ತು 10 ಬೌಂಡರಿ ಬಾರಿಸಿದ ವೈಭವ್, ಪವರ್​ಪ್ಲೇಯಲ್ಲಿ ಆಡಿದ ಸ್ಫೋಟಕ ಇನ್ನಿಂಗ್ಸ್ ದಿಗ್ಗಜರನ್ನೇ ಒಂದು ನಿಮಿಷ ಅಚ್ಚರಿಗೆ ದೂಡಿತು. ಕೇವಲ 20 ಓವರ್​​ಗೆ ಮಾತ್ರವಲ್ಲ, ಏಕದಿನ ಫಾರ್ಮೆಟ್​ಗೂ ನಾನು ಸಿದ್ಧ ಎಂಬುದನ್ನು ಬೇಬಿ ಬಾಸ್​ ಸಾಬೀತುಪಡಿಸಿದರು. ಇದನ್ನು ಇಡೀ ಜಗತ್ತು ಕೂಡ ಕೊಂಡಾಡುತ್ತಿದೆ. ಆದರೆ, ಬಿರುಸಿನ ಬ್ಯಾಟಿಂಗ್​ನಿಂದ ವೈಭವ್​ಗೆ ಗೊತ್ತಿಲ್ಲದ ಸಮಸ್ಯೆಗಳು ಕಾಡುವ ಬಗ್ಗೆ ಡ್ಯಾರಿಲ್ ಕಲಿನನ್ ಕಳವಳ ವ್ಯಕ್ತಪಡಿಸಿದ್ದಾರೆ.

ಯಾಕೆ ಯಾರೂ ಮಾತಾಡ್ತಿಲ್ಲ?

ವೈಭವ್​ಗೆ ಈ ಮಟ್ಟಿಗಿನ ಕ್ರಿಕೆಟ್ ಮುಂದಿನ ದಿನಗಳಲ್ಲಿ ಇಂಜುರಿಗೆ ಕಾರಣವಾಗಬಹುದು. ಆತ ಇನ್ನೂ 15 ವರ್ಷದ ಪುಟ್ಟ ಹುಡುಗ. ಸೂರ್ಯವಂಶಿ ಕಂಡರೆ ನನಗಂತು ಬಹಳ ಇಷ್ಟ ಮತ್ತು ಅವರ ಆಟಕ್ಕೆ ನಾನಂತು ಅಕ್ಷರಶಃ ಬೆರಗಾಗಿದ್ದೇನೆ. ಆದ್ರೆ, ನನ್ನನ್ನು ಕಾಡುತ್ತಿರುವುದು ಇಂಜುರಿ ಸಮಸ್ಯೆಗಳು ಅಷ್ಟೇ. ಎಲ್ಲರೂ ಅವರನ್ನು ಹೊಗಳುತ್ತಿದ್ದಾರೆಯೇ ಹೊರತು ಯಾರೂಬ್ಬರು ಏಕೆ ಅದರ ಬಗ್ಗೆ ಮಾತನಾಡುತ್ತಿಲ್ಲ ಅನ್ನೋದು ನನ್ನ ಪ್ರಶ್ನೆಯಾಗಿದೆ ಎಂದಿದ್ದಾರೆ.
"15ನೇ ವಯಸ್ಸಿಗೆ ಬ್ಯಾಟ್​ ಅನ್ನು ಬೀಸುವುದರಿಂದ ವೈಭವ್​ ಅವರ ಕೈಗಳು, ಮಣಿಕಟ್ಟುಗಳು, ಮೊಣಕೈಗಳು, ಸಣ್ಣ ಕೀಲುಗಳು ಡ್ಯಾಮೇಜ್​ ಆಗುವ ಸಾಧ್ಯತೆಗಳಿವೆ. ವೈದ್ಯಕೀಯ ಸಲಹೆಗಳು ಏನು ಹೇಳುತ್ತದೆ ಅನ್ನೋದು ನಿಮಗೆ ಗೊತ್ತಿರಲಿ. ಇದೇ ಒಂದು ಕಾಲದಲ್ಲಿ, ಸಚಿನ್ ತೆಂಡೂಲ್ಕರ್​ ಅವರ ವೃತ್ತಿಜೀವನವು ಮೊಣಕೈ ಸಮಸ್ಯೆಯಿಂದ ಕಾಡಿತ್ತು. ಆದರೆ, ವೈಭವ್​​ನಂತೆ ಅವರು ಜೋರಾಗಿ ಬೀಸಾಡುತ್ತಿರಲಿಲ್ಲ. ಇಲ್ಲಿ ಅವರ ಮುಂದಿನ ಭವಿಷ್ಯ ಮತ್ತು ಆರೋಗ್ಯದ ಬಗ್ಗೆ ನನಗೆ ಆತಂಕವಿದೆ" ಎಂದು ಕುಲಿನನ್ ತಮ್ಮ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net