ಇಷ್ಟಕ್ಕೆಲ್ಲ ಅವರೇ ಕಾರಣ... ಸಿಎಸ್​ಕೆ ಎದುರು ಸೋತ ಬೆನ್ನಲ್ಲೇ ಪಾಂಡ್ಯ ಶಾಕಿಂಗ್​ ಹೇಳಿಕೆ | CSK vs MI

ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ
Published on

ಪ್ರಮುಖ ಮುಖ್ಯಾಂಶಗಳು

  • ಮುಂಬೈ ಇಂಡಿಯನ್ಸ್‌ಗೆ ಮತ್ತೊಂದು ಹೀನಾಯ ಸೋಲು
  • ಚೆನ್ನೈ ಸೂಪರ್ ಕಿಂಗ್ಸ್‌ಗೆ 8 ವಿಕೆಟ್‌ಗಳ ಸುಲಭ ಗೆಲುವು
  • ಪ್ಲೇಆಫ್ ರೇಸ್​ನಿಂದ ದೂರ ಸರಿದ ಹಾರ್ದಿಕ್​ ಪಾಂಡ್ಯ ಪಡೆ
CSK vs MI: ನಿನ್ನೆ (ಮೇ.02) ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ರುತುರಾಜ್​ ಗಾಯಕ್ವಾಡ್​ ಪಡೆ 8 ವಿಕೆಟ್​ಗಳಿಂದ ಸುಲಭ ಗೆಲುವು ದಾಖಲಿಸಿತು. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್​ಗೆ ಈ ಸೋಲಿನಿಂದ ಪ್ಲೇಆಫ್​ ಕನಸು ಬಹುತೇಕ ಛಿದ್ರಗೊಂಡಿದೆ.
ಈ ಲೀಗ್​ನಲ್ಲಿ ಉಳಿದಿರುವ ಐದಕ್ಕೂ ಐದೂ ಪಂದ್ಯಗಳನ್ನು ಗೆದ್ದರೆ ಮಾತ್ರ ಮುಂಬೈ ಇಂಡಿಯನ್ಸ್​ಗೆ ಪ್ಲೇಆಫ್​ ಎಂಟ್ರಿಗೆ ಸಾಧ್ಯತೆಗಳಿವೆ. ಅದರಲ್ಲೂ, ಹೆಚ್ಚಿನ ರನ್​ರೇಟ್​ನೊಂದಿಗೆ ಅಥವಾ ಪಾಯಿಂಟ್​ಗಳಿಂದ ಏನಾದರೂ ಜಯ ಸಾಧಿಸಿದರೆ, ಅಂಕಪಟ್ಟಿಯ ಅಗ್ರ ನಾಲ್ಕರಲ್ಲಿ ಸ್ಥಾನ ಖಚಿತವಾಗಲಿದೆ. ಈ ಮಧ್ಯೆ, ಚೆನ್ನೈ ವಿರುದ್ಧ ಗೆಲ್ಲಲೇಬೇಕಾದ ಮ್ಯಾಚ್​ನಲ್ಲಿಯೂ ಮತ್ತದೇ ಸೋಲಿನ ಹಾದಿ ಹಿಡಿದ ಹಾರ್ದಿಕ್​ ಪಾಂಡ್ಯ ಕಡೆಗೂ ತಮ್ಮ ಸೋಲಿಗೆ ಕಾರಣವೇನು? ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಈ ಪಿಚ್‌ನಲ್ಲಿ 180ರಿಂದ 190 ರನ್‌ಗಳು ಉತ್ತಮ ಸ್ಕೋರ್ ಆಗಿದೆ. ಒಂದು ಹಂತದಲ್ಲಿ ನಾವು ಸುಲಭವಾಗಿ ಈ ಸ್ಕೋರ್​ ಗಳಿಸಬಹುದು ಎಂದುಕೊಂಡಿದ್ದೆ. ಆದರೆ, 10 ಓವರ್‌ಗಳ ನಂತರ, ನಮ್ಮ ಬ್ಯಾಟಿಂಗ್ ಆಕ್ರಮಣಕಾರಿಯಾಗಿ ಮುಂದುವರಿಯಲಿಲ್ಲ. ಬ್ಯಾಟಿಂಗ್ ವಿಭಾಗದಲ್ಲಿ ನಮ್ಮ ಬ್ಯಾಟರ್​ಗಳಿಂದ ಸಂಪೂರ್ಣವಾಗಿ ವಿಫಲರಾದೆವು. ಬೌಲಿಂಗ್ ವಿಭಾಗದಲ್ಲಿ ನಾವು ನಿರೀಕ್ಷಿಸಿದಷ್ಟು ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಸಿಎಸ್‌ಕೆ ಉತ್ತಮವಾಗಿ ಬೌಲಿಂಗ್ ಮಾಡಿದರು ಎಂದರು.
ನಮ್ಮ ಬೌಲರ್​ಗಳು ಸಿಎಸ್‌ಕೆ ಬ್ಯಾಟರ್‌ಗಳನ್ನು ಕಂಟ್ರೋಲ್​ ಮಾಡಲು ಪ್ರಯತ್ನಿಸಿದರು. ಆದರೆ, ಅವರು ಚುರುಕಾಗಿ ಬ್ಯಾಟಿಂಗ್ ಮಾಡಿದರು. ವಾಸ್ತವವಾಗಿ, ನೀವು ಕ್ರೀಸ್‌ಗೆ ಬಂದಾಗ ಈ ಪಿಚ್‌ನಲ್ಲಿ ದೊಡ್ಡ ಹೊಡೆತಗಳನ್ನು ಆಡುವುದು ಸುಲಭವಲ್ಲ. ಲೆಕ್ಕಾಚಾರದ ಕ್ರಿಕೆಟ್ ಆಡುವುದು ಮತ್ತು ವಿಕೆಟ್‌ಗಳನ್ನು ಪಡೆಯುವುದು ಇಲ್ಲಿ ಪ್ರಮುಖವಾಗಿದೆ. ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಗ್ಗರಿಸಿದೆವು. ಈ ಪಂದ್ಯದಲ್ಲಿ ಚೆನ್ನೈ ಮೂರು ವಿಭಾಗಗಳಲ್ಲಿ ನಮಗಿಂತಲೂ ಉತ್ತಮವಾಗಿ ಪ್ರದರ್ಶನ ನೀಡಿತು ಎಂದು ಹಾರ್ದಿಕ್ ಹೇಳಿದರು.

ಪಂದ್ಯದ ವಿವರ

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್​, 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ ಕೇವಲ 159 ರನ್​ ಕಲೆಹಾಕಲಷ್ಟೇ ಶಕ್ತವಾಯಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆಗೆ ಆರಂಭಿಕರಾದ ಸಂಜು ಸ್ಯಾಮ್ಸನ್​ರಿಂದ ಉತ್ತಮ ಇನ್ನಿಂಗ್ಸ್​ ಬರಲಿಲ್ಲ. ಅವರ ಬೆನ್ನಲ್ಲೇ ಮತ್ತೊಂದು ವಿಕೆಟ್​ ಹೋಗುತ್ತಿದ್ದಂತೆ ಚೆನ್ನೈ ಪಡೆಗೆ ಸೋಲೇ ಗತಿ ಎನ್ನಲಾಯಿತು. ಹೀಗಿರುವಾಗ, ಕ್ರೀಸ್​ಗೆ ಅಂಟಿ ನಿಂತ ಕ್ಯಾಪ್ಟನ್​ ರುತುರಾಜ್ ಗಾಯಕ್ವಾಡ್ (ಅಜೇಯ 67 ರನ್​) ಮತ್ತು ಕಾರ್ತಿಕ್ ಶರ್ಮ (ಅಜೇಯ 54​) ಉತ್ತಮ ಜೊತೆಯಾಟ ನೀಡುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. 11 ಬಾಲ್​ ಉಳಿದಿರುವಂತೆ ಪಂದ್ಯವನ್ನು ಮುಗಿಸಿದರು,(ಏಜೆನ್ಸೀಸ್). ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net