ಪಂತ್​ ಪಡೆಯಿಂದ ಬಿಗ್ ಮಿಸ್ಟೇಕ್​​! ಸಿಕ್ಸರ್​ಗಳ ಸುರಿಮಳೆಯಿಂದ ರುತುರಾಜ್​ ಪಡೆಗೆ ರೋಚಕ ಜಯ | CSK vs LSG

CSK vs LSG ಪಂದ್ಯ
CSK vs LSG ಪಂದ್ಯ
Published on
CSK vs LSG: ಇಂದು (ಮೇ.10) ಚೆನ್ನೈ ಕ್ರೀಡಾಂಗಣದಲ್ಲಿ ನಡೆದ ಸಿಎಸ್​ಕೆ ಮತ್ತು ಎಲ್​ಎಸ್​ಜಿ ನಡುವಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ರೋಚಕ ಜಯ ಸಾಧಿಸಿತು.
ಟಾಸ್​ ಗೆದ್ದು ಮೊದಲು ಬೌಲ್​ ಮಾಡಿದ ಸಿಎಸ್​ಕೆ, ಪಂತ್ ಪಡೆಗೆ ಬ್ಯಾಟ್​ ಮಾಡುವಂತೆ ಹೇಳಿದರು. 20 ಓವರ್​ನಲ್ಲಿ 8 ವಿಕೆಟ್​ ನಷ್ಟಕ್ಕೆ ಎಲ್​ಎಸ್​ಜಿ 203 ರನ್ ಕಲೆಹಾಕಿತು. ಈ ಬೃಹತ್​ ಗುರಿಯನ್ನು ಬೆನ್ನತ್ತಿದ ಚೆನ್ನೈ ಪಡೆಗೆ ಆರಂಭಿಕ ಹಂತದಲ್ಲೇ ಸಂಜು ಸ್ಯಾಮ್ಸನ್​ ವಿಕೆಟ್​ ದೊಡ್ಡ ಸಂಕಷ್ಟಕ್ಕೆ ಸಿಲುಕಿಸಿತು. ​
ಸಂಜು ನಂತರದಲ್ಲಿ ಕಣಕ್ಕಿಳಿದ ಯುವ ಬ್ಯಾಟರ್​ ಉರ್ವಿಲ್ ಪಟೇಲ್ (65 ರನ್​)​ ಅತಿ ವೇಗದ ಅರ್ಧಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುವಲ್ಲಿ ಸಹಾಯ ಮಾಡಿದರು. ಉರ್ವಿಲ್​ ಮತ್ತು ಪ್ರಶಾಂತ್​ ತಂಡದ ಪರ ಬ್ಯಾಕ್​ ಟು ಬ್ಯಾಕ್​ ಸಿಕ್ಸರ್​ಗಳ ಸುರಿಮಳೆಗೈದರು. ಇದರ ಸಹಾಯದಿಂದ ಸಿಎಸ್​ಕೆ, ಕೊನೆಯವರೆಗೂ ತಲುಪಿದ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿತು.
ಇನ್ನು ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಬ್ಯಾಟರ್​ಗಳನ್ನು ಕಟ್ಟಿಹಾಕುವಲ್ಲಿ ಎಡವಿದ ಪಂತ್​ ಪಡೆಯ ಬೌಲರ್​ಗಳು ವಿಕೆಟ್​ ತೆಗೆಯುವುದು ಇರಲಿ, ಕೈಗೆ ಸಿಕ್ಕ ಹಲವು ಕ್ಯಾಚ್​ಗಳನ್ನು ಬಿಡುವ ಮೂಲಕ ತಂಡದ ಸೋಲಿಗೆ ಪ್ರಮುಖ ಕಾರಣರಾದರು. ಸ್ಪಿನ್ನರ್​ ದಿಗ್ವಿಶ್​ ರಾಠಿ ಒಂದಲ್ಲ, ಎರಡಲ್ಲ ಒಟ್ಟು ಮೂರು ಕ್ಯಾಚ್​ಗಳನ್ನು ಕೈಚೆಲ್ಲಿದ್ದು ಕ್ಯಾಪ್ಟನ್​ ಪಂತ್​ರನ್ನು ತೀವ್ರ ಸಿಟ್ಟಾಗಿಸಿತು. ಈ ಪಂದ್ಯವನ್ನು ಗೆದ್ದ ರುತುರಾಜ್​ ಪಡೆ ಈಗ ಅಂಕಪಟ್ಟಿಯಲ್ಲಿ 12 ಪಾಯಿಂಟ್​ಗಳಿಂದ 5ನೇ ಸ್ಥಾನಕ್ಕೆ ಜಿಗಿದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net