ಅಭಿಷೇಕ್​, ಕ್ಲಾಸೆನ್​ ಮಾಸ್​ ಆಟ; ಎಸ್​ಆರ್​ಎಚ್​​ಗೆ 10 ರನ್​ಗಳ ರೋಚಕ ಜಯ | SRHvsCSK

SRHvsCSK
SRHvsCSK
Published on
SRHvsCSK: ಇಂದು ( ಶನಿವಾರ ಏ.18) ಹೈದ್ರಾಬಾದ್​ನ ರಾಜೀವ್​ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಎಸ್​ಆರ್​​ಎಚ್​​ ತಂಡ 10 ರನ್​ಗಳ ರೋಚಕ ಜಯ ಸಾಧಿಸಿದೆ.
ಟಾಸ್​ ಗೆದ್ದ ಚೆನ್ನೈ ತಂಡ ಎಸ್​ಆರ್​ಎಚ್​ ತಂಡವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 15 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದರು, ಇದು ಈ ಆವೃತಿಯ ಐಪಿಎಲ್​ನಲ್ಲಿ ಜಂಟಿ ವೇಗದ ಅರ್ಧಶತಕ (ವೈಭವ್ ಸೂರ್ಯವಂಶಿ ದಾಖಲೆಯನ್ನು ಸರಿದೂಗಿಸಿದರು). ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ (59 ರನ್, 39 ಎಸೆತ) ಜವಾಬ್ದಾರಿಯುತ ಆಟದ ಮೂಲಕ ಹೈದರಾಬಾದ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 194 ರನ್ ದಾಖಲಿಸಿತು. ಚೆನ್ನೈ ಪರ ಬೌಲಿಂಗ್‌ನಲ್ಲಿ ಜೆಮಿ ಓವರ್‌ಟನ್ ಮತ್ತು ಅಂಶುಲ್ ಕಾಂಬೋಜ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರೆ, ಮುಖೇಶ್ ಚೌಧರಿ ಎರಡು ವಿಕೆಟ್ ಕಬಳಿಸಿದರು.

ಪವರ್‌ಪ್ಲೇನಲ್ಲಿ ಸಿಎಸ್‌ಕೆ ಅಬ್ಬರ; ಮಧ್ಯದಲ್ಲಿ ಮಲಿಂಗಾ ಮೋಡಿ

195 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಆರಂಭ ಉತ್ತಮವಾಗಿರಲಿಲ್ಲ ತಂಡದ ಮೊತ್ತ 15 ಆಗಿದ್ದಾಗ ಸಂಜು ಸ್ಯಾಮ್ಸನ್​ ಔಟ್​ ಆದರೆ, ನಾಯಕ ರುತುರಾಜ್​ 19 ರನ್​ಗಳಿಸಿ ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಈ ವೈಫಲ್ಯದ ಹೊರತಾಗಿಯೂ ಸಿಎಸ್​ಕೆ 76 ರನ್ ಗಳಿಸಿತು. ಮೂರನೇ ಕ್ರಮಾಂಕದಲ್ಲಿ ಬಂದ ಆಯುಷ್ ಮಾತ್ರೆ (30 ರನ್, 13 ಎಸೆತ) ಮತ್ತು ಆಲ್‌ರೌಂಡರ್ ಮ್ಯಾಥ್ಯೂ ಶಾರ್ಟ್ (34 ರನ್, 30 ಎಸೆತ) ತಂಡದ ಮೊತ್ತವನ್ನು ಚೇತರಿಸುವಂತೆ ಮಾಡಿದರು ಕೂಡ ತಂಡವನ್ನು ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ.
ಹೈದ್ರಾಬಾದ್​ ಪರ ಕರಾರುವಾಕ್ ದಾಳಿ ನಡೆಸಿದ ಇಶಾನ್​ ಮಲಿಂಗಾ ಪ್ರಮುಖ ಮೂರು ವಿಕೆಟ್ ಪಡೆದು ಸಿಎಸ್‌ಕೆ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು. ಇದರಿಂದಾಗಿ ಒಂದು ಹಂತದಲ್ಲಿ ಸುಲಭವಾಗಿ ಗೆಲ್ಲುವ ಹಾದಿಯಲ್ಲಿದ್ದ ಚೆನ್ನೈ 10 ರನ್​ಗಳ ಸೋಲನುಭವಿಸಿತು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net