ಟೂರ್ನಿಯ ನಿರ್ಣಾಯಕ ಹಂತದಲ್ಲಿ ಸಿಎಸ್‌ಕೆಗೆ ಫಿನಿಷರ್‌ಗಳ ಕೊರತೆ ಇದೆ. ಡಿವಾಲ್ಡ್ ಬ್ರೆವಿಸ್, ಕಾರ್ತಿಕ್ ಶರ್ಮ ಮತ್ತು ಶಿವಂ ದುಬೆ ಅವರಿಂದ ಮಧ್ಯಮ ಓವರ್‌ಗಳಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಕಂಡುಬಂದಿಲ್ಲ. ಅಗ್ರ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ (430), ಊರ್ವಿಲ್ ಪಟೇಲ್, ಋತುರಾಜ್ ಮೇಲೆ ಅವಲಂಬಿತವಾಗಿದೆ. ಆಲ್ರೌಂಡರ್ ಜೇಮಿ ಓವರ್ಟನ್ ಸ್ನಾಯುಸೆಳೆತದ ಸಮಸ್ಯೆಯಿಂದ ಟೂರ್ನಿಯ ಉಳಿದ ಪಂದ್ಯಕ್ಕೆ ಅಲಭ್ಯರಾಗಿದ್ದು, ಸಿಎಸ್‌ಕೆ ಬೌಲಿಂಗ್ ವಿಭಾಗಕ್ಕೆ ಹಿನ್ನಡೆ ತಂದಿದೆ. ಅಂಶುಲ್ ಕಂಬೋಜ್ (19) ವಿಕೆಟ್ ಪಡೆದರೂ ದುಬಾರಿ ಆಗಿದ್ದು, ಏಕನಾ ಪಿಚ್‌ನಲ್ಲಿ ನೂರ್ ಅಹ್ಮದ್, ಅಕೀಲ್ ಹೊಸೈನ್ ಲಖನೌ ಬ್ಯಾಟರ್ಸ್‌ಗಳನ್ನು ಕಾಡಬಲ್ಲರು. ಲಖನೌ ತಂಡ ತನ್ನ ಉಳಿದ ಮೂರು ಪಂದ್ಯಗಳಲ್ಲಿ ಗೆದ್ದರೂ ಪ್ಲೇಆಫ್ ಅರ್ಹತೆ ಪಡೆಯುವುದಿಲ್ಲ. ಮುಂದಿನ ಆವೃತ್ತಿಗೆ ಗೆಲುವಿನ ಸಂಯೋಜನೆ ಕಂಡುಕೊಳ್ಳಲು ಉಳಿದ ಪಂದ್ಯಗಳು ಉತ್ತಮ ಅವಕಾಶ ಎನಿಸಿದೆ.