ದುಬೆ ವಿಕೆಟ್​ ಹೋಗಿದ್ದೇ ಆ ನಿಂಬೆ ಹಣ್ಣಿನಿಂದ; ಪಂದ್ಯದ ವೇಳೆ SRH​ ಫ್ಯಾನ್ಸ್​ಗಳಿಂದ ಮಾಟ-ಮಂತ್ರ? ಸಿಎಸ್​ಕೆ ದೂರು?

ಸಿಎಸ್​ಕೆ-ಎಸ್​ಆರ್​ಎಚ್​ ಪಂದ್ಯದ ನಡುವಿನ ದೃಶ್ಯ
ಸಿಎಸ್​ಕೆ-ಎಸ್​ಆರ್​ಎಚ್​ ಪಂದ್ಯದ ನಡುವಿನ ದೃಶ್ಯ
Published on

ಪ್ರಮುಖ ಮುಖ್ಯಾಂಶಗಳು

  • ಸಿಎಸ್​ಕೆ ಮತ್ತು ಎಸ್​ಆರ್​ಎಚ್​ ನಡುವಿನ ಐಪಿಎಲ್​ ಪಂದ್ಯ
  • ಸನ್​ರೈಸರ್ಸ್​ ಹೈದರಾಬಾದ್​ ಫ್ಯಾನ್​ ನಡೆಗೆ ಸಿಎಸ್​ಕೆ ಫ್ರಾಂಚೈಸಿ ಕಿಡಿ?
  • ಅಷ್ಟಕ್ಕೂ ಆಗಿದ್ದೇನು? ನಿಜಕ್ಕೂ ಮೈದಾನದಲ್ಲಿ ಇದೆಲ್ಲ ನಡೆಯಿತೇ?
ಹೈದರಾಬಾದ್​: ಐಪಿಎಲ್ 19ನೇ ಆವೃತ್ತಿಯ ಭಾಗವಾಗಿ, ಶನಿವಾರ (ಏ.18) ಹೈದರಾಬಾದ್‌ನ ಉಪ್ಪಾಲ್​ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯದಲ್ಲಿ ಇಶಾನ್​ ಕಿಶನ್​ ಪಡೆ 10 ರನ್​ಗಳ ರೋಚಕ ಗೆಲುವು ದಾಖಲಿಸಿತು. ಆದರೆ, ಪಂದ್ಯದ ವೇಳೆ ಎಸ್​ಆರ್​ಎಚ್​ ಅಭಿಮಾನಿಗಳಿಂದ ಆದ ಕೆಲವು ಅಹಿತಕರ ಘಟನೆಗಳು ಸದ್ಯ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿಗೆ ತೀರ ಬೇಸರ ತಂದಂತಿದೆ.
ಇಶಾನ್ ಕಿಶನ್ ಪಡೆ ನೀಡಿದ 196 ರನ್​ಗಳ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆಗೆ ಪವರ್​ಪ್ಲೇಯಲ್ಲಿ ಉತ್ತಮ ಸ್ಕೋರ್​ ಬಂದಿದ್ದೇ ಆದರೂ ನಂತರದ ಓವರ್​ಗಳಲ್ಲಿ ಹೆಚ್ಚುವರಿ ರನ್​ಗಳು ಬರಲಿಲ್ಲ. ತಂಡದ ಸ್ಫೋಟಕ ಬ್ಯಾಟರ್​ಗಳಾದ ಆಯುಷ್​ ಮಾತ್ರೆ, ಡೆವಾಲ್ಡ್​ ಬ್ರೆವಿಸ್​, ಸರ್ಫರಾಜ್ ಖಾನ್​ ಮತ್ತು ಶಾರ್ಟ್​ರಂತಹ ಬ್ಯಾಟರ್​ಗಳು ಹೆಚ್ಚು ಕಾಲ ಕ್ರೀಸ್​​ನಲ್ಲಿ ನಿಲ್ಲದೆ, ಸೀದಾ ಪೆವಿಲಿಯನ್​ಗೆ ಮರಳಿದರು. ಇದು ತಂಡದ ಅಭಿಮಾನಿಗಳ ನಿರಾಶೆಗೆ ಕಾರಣವಾಯಿತು. ಮತ್ತೊಂದೆಡೆ, ಸಿಎಸ್​ಕೆ ಚೇಸಿಂಗ್​ನಲ್ಲಿದ್ದ ವೇಳೆ ಎಸ್​ಆರ್​ಎಚ್​ ಅಭಿಮಾನಿಗಳು ಕೈಯಲ್ಲಿ ನಿಂಬೆ ಹಣ್ಣು ಹಿಡಿದು, ಯಾವುದೋ ಮಂತ್ರ ಹೇಳುತ್ತಿರುವ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ತಂಡವನ್ನು ಗೆಲ್ಲಿಸಲು ಕ್ರೀಸ್​ಗೆ ಅಂಟಿ ನಿಂತಿದ್ದ ಶಿವಂ ದುಬೆ, ಸಿಕ್ಸರ್​ ಬಾರಿಸುವ ಪ್ರಯತ್ನದಲ್ಲಿದ್ದರು. ಇದೇ ವೇಳೆ, ಮೈದಾನದಲ್ಲಿದ್ದ ಸನ್​ರೈಸರ್ಸ್​ ಹೈದರಾಬಾದ್​ ಅಭಿಮಾನಿಯೊಬ್ಬರು, ಕೈಯಲ್ಲಿ ನಿಂಬೆ ಹಣ್ಣು ಹಿಡಿದು, ಮಂತ್ರ ಹೇಳಿಬಿಟ್ಟ ಕೂಡಲೇ ದುಬೆ ಅವರ ವಿಕೆಟ್​ ಹೋಗುತ್ತದೆ. ಇದನ್ನು ಕಂಡ ಕ್ಷಣ ಅವರು ತೀರ ಖುಷಿಯಿಂದ ಸಂಭ್ರಮಿಸುತ್ತಾರೆ. ಈ ದೃಶ್ಯಗಳು ವೈರಲ್ ಆದ ಬೆನ್ನಲ್ಲೇ, ಚೆನ್ನೈ ಫ್ರಾಂಚೈಸಿ ಬಿಸಿಸಿಐಗೆ ದೂರು ನೀಡಿದೆ ಎಂಬ ಪತ್ರವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಗೊತ್ತಿಲ್ಲ. ಕಾರಣ, ಈ ಕುರಿತಂತೆ ಫ್ರಾಂಚೈಸಿ, ತನ್ನ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್​ ಅಥವಾ ಪತ್ರವನ್ನು ಹಂಚಿಕೊಂಡಿರುವುದು ಕಂಡುಬಂದಿಲ್ಲ. 

ದೋಸೆ, ಇಡ್ಲಿ, ಸಾಂಬಾರ್​....

ಇತ್ತೀಚೆಗಷ್ಟೇ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ನಡೆದ ಒಂದು ಘಟನೆಗೆ ಸಂಬಂಧಿಸಿದಂತೆ ಸಿಎಸ್​ಕೆ, ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಗೆ (BCCI) ದೂರು ನೀಡಿತು. ಏಪ್ರಿಲ್​ 5ರಂದು ತಮ್ಮ ಇನ್ನಿಂಗ್ಸ್ ಪ್ರಾರಂಭವಾಗುವ ಮೊದಲೇ ಆರ್​ಸಿಬಿ ನಮಗೆ ಕಿರುಕುಳ ನೀಡಿದೆ ಮತ್ತು ಅಗೌರವದಿಂದ ವರ್ತಿಸಿದೆ ಎಂದು ಆರೋಪಿಸಿ ಸಿಎಸ್​ಕೆ, ಬಿಸಿಸಿಐಗೆ ದೂರು ಸಲ್ಲಿಸಿದೆ ಎಂದು ವರದಿಯಾಯಿತು. ಇದು ಕೆಲ ಕ್ರಿಕೆಟ್​ ಅಭಿಮಾನಿಗಳಿಗೆ ನಗು ತರಿಸಿದರೆ, ಇನ್ನೂ ಕೆಲವರಲ್ಲಿ ಆಶ್ಚರ್ಯ ಉಂಟುಮಾಡಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net