ಯೋಗಿ ಜೀ, ಮೋದಿ ಜೀ ಯಾರನ್ನು ಕೇಳ್ಬೇಕು? ಕಳ್ಳತನದ ಬಗ್ಗೆ ದೀಪಕ್​ ಚಾಹರ್ ಪ್ರಶ್ನಿಸಿದ ವಿಡಿಯೋ ವೈರಲ್​ |​ Deepak Chahar

ಈಗ ಇದನ್ನು ವಾಪಾಸ್​ ಪಡೆಯಲು ನಾನು ಪೊಲೀಸರು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಬೇಕಾ ಎಂದು ಹೇಳಿರುವುದು ಒಂದಷ್ಟು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.
Deepak Chahar
ಯೋಗಿ ಜೀ, ಮೋದಿ ಜೀ ಯಾರನ್ನು ಕೇಳ್ಬೇಕು? ಕಳ್ಳತನದ ಬಗ್ಗೆ ದೀಪಕ್​ ಚಾಹರ್ ಪ್ರಶ್ನಿಸಿದ ವಿಡಿಯೋ ವೈರಲ್​
Published on: 

Deepak Chahar: ಟೀಮ್ ಇಂಡಿಯಾದ ಸ್ಟಾರ್​ ವೇಗಿ ದೀಪಕ್ ಚಹಾರ್ ಇದೀಗ ಕಳ್ಳತನದ ಬಗ್ಗೆ ಮಾಡಿರುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಗೊಂದಲಕ್ಕೆ ಕಾರಣವಾಗಿದೆ.

ಮೈದಾನದಲ್ಲಿ ಕ್ರಿಕೆಟ್​ ಪ್ರ್ಯಾಕ್ಟೀಸ್​ ಮಾಡುತ್ತಿದ್ದ ವೇಳೆ ಒಂದಲ್ಲ, ಎರಡಲ್ಲ ಒಟ್ಟು ಮೂರು ಬ್ಯಾಟ್​ಗಳನ್ನು ಯಾರೋ ಕಳ್ಳತನ ಮಾಡಿದ್ದಾಗಿ ಚಾಹರ್​ ಆರೋಪಿಸಿದ್ದಾರೆ. ಕಾಣೆಯಾದ ಬ್ಯಾಟ್‌ಗಳು ಮೌಲ್ಯ ಸುಮಾರು 1.5 ಲಕ್ಷ ರೂ. ಆಗಿದೆ. ಈಗ ಇದನ್ನು ವಾಪಾಸ್​ ಪಡೆಯಲು ನಾನು ಪೊಲೀಸರು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಬೇಕಾ ಎಂದು ಹೇಳಿರುವುದು ಒಂದಷ್ಟು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

ವರದಿಗಳ ಪ್ರಕಾರ, ಆಗ್ರಾದ ಅರ್ಟೋನಿಯಲ್ಲಿರುವ ಮೈದಾನದಲ್ಲಿ ಈ ಘಟನೆ ನಡೆದಿದೆ. ಕ್ರಿಕೆಟ್​ ಅಭ್ಯಾಸದ ವೇಳೆ ಬೌಲಿಂಗ್ ಮಾಡುತ್ತಿದ್ದ ದೀಪಕ್​, ಬಳಿಕ ಬ್ಯಾಟಿಂಗ್​ಗೆ ಎಂದು ಬಂದು ಕಿಟ್​ ನೋಡಿದಾಗ ಅಲ್ಲಿ ಬ್ಯಾಟ್​ ಇಲ್ಲದಿರುವುದನ್ನು ಗಮನಿಸಿದ್ದಾರೆ. ಕಿಟ್‌ನಲ್ಲಿದ್ದ ಮೂರು ಬ್ಯಾಟ್‌ಗಳು ದಿಢೀರ್​ ಕಣ್ಮರೆಯಾಗಿವೆ. ಈ ಬಗ್ಗೆ ನನ್ನ ತಂದೆ ಮತ್ತು ಕೋಚ್ ಲೋಕೇಂದ್ರ ಚಾಹರ್ ಕೂಡ ಸ್ಪಷ್ಟಪಡಿಸಿದ್ದಾರೆ. ಕದ್ದಿರುವವರಿಗೆ ಅವು ತುಂಬ ದುಬಾರಿ ಎಂದು ಗೊತ್ತಿಲ್ಲ ಎಂದಿದ್ದಾರೆ.

ನಾಲಿಗೆ ಹರಿಬಿಟ್ಟಿದ್ದ ಅಥವಾ ತಮಾಷೆನಾ?

ಅಸಲಿಗೆ, ಕಳ್ಳತನ ಆಗಿರುವುದು ನಿಜವೇ ಆದರೂ ಇದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳದ ದೀಪಕ್​, ಹಾಸ್ಯಸ್ಪದವಾಗಿಯೇ, ನಾನು ಪೊಲೀಸರಿಗೆ ದೂರು ಕೊಡಬೇಕೋ, ಸಿಎಂ ಯೋಗೀ ಜಿ ಅಥವಾ ಪ್ರಧಾನಿ ಮೋದಿ ಜಿ ಬಳಿ ಹೋಗಬೇಕೋ? ಎಂದು ವಿಡಿಯೋ ಮುಖಾಂತರ ಕೇಳಿದ್ದಾರೆ. ಈ ದೃಶ್ಯ ಸದ್ಯ ಜಾಲತಾಣಗಳಲ್ಲಿ ಹರಿದಾಡಿದ್ದು, ಅನೇಕರು ಕಮೆಂಟ್​ಗಳಲ್ಲಿ, ಐಪಿಎಲ್​ನಲ್ಲಿ ಸಿಎಸ್​ಕೆ ತಂಡದಲ್ಲಿದ್ದಾಗ ಮಾಡುತ್ತಿದ್ದ ಕಾಮಿಡಿಯನ್ನೇ ಇಲ್ಲಿಯೂ ನೆನಪಿಸಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net