ಕ್ರಿಕೆಟ್ಗೂ, ಚಿತ್ರರಂಗಕ್ಕೂ ಅವಿನಾಭಾವ ಸಂಬಂಧ. ಮನ್ಸೂರ್ ಅಲಿ ಖಾನ್ ಪಟೌಡಿ - ಶರ್ಮಿಳಾ ಟಾಗೋರ್, ಜಹೀರ್ ಖಾನ್ -ಸಾಗರಿಕಾ ಘಟ್ಗೆ, ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ, ಕೆ.ಎಲ್. ರಾಹುಲ್ - ಅಥಿಯಾ ಶೆಟ್ಟಿ, ಯುವರಾಜ್ ಸಿಂಗ್ - ಹ್ಯಾಜೆಲ್ ಕೀಚ್... ಹೀಗೆ ಹಲವು ಕ್ರಿಕೆಟಿಗರು, ಬಾಲಿವುಡ್ ನಟಿಯರ ಜತೆ ಸಪ್ತಪದಿ ಇಟ್ಟಿದ್ದಾರೆ. ಇನ್ನು ಲವ್, ಬ್ರೇಕಪ್ಗಳನ್ನು ಸೇರಿಸಿಕೊಂಡರೆ, ಈ ಸಾಲು ಇನ್ನೂ ಉದ್ದ ಸಾಗುತ್ತದೆ! ಇನ್ನು ಈ ಕ್ರಿಕೆಟರ್ ಮತ್ತು ಆ್ಯಕ್ಟರ್ ಲವ್ಸ್ಟೋರಿ ಲಿಸ್ಟ್ಗೆ ಮತ್ತೊಂದು ಜೋಡಿ ಸೇರಿಕೊಂಡಿದೆ. ಇತ್ತೀಚೆಗಷ್ಟೆ ಕ್ರಿಕೆಟಿಗ ಅರ್ಷದೀಪ್ ಸಿಂಗ್, ಬಾಲಿವುಡ್ ನಟಿ ಸಮ್ರೀನ್ ಕೌರ್ ಜತೆಗಿನ ಪ್ರೀತಿಯನ್ನು ಅಧಿಕೃತಗೊಳಿಸಿದ್ದಾರೆ. 19ನೇ ಐಪಿಎಲ್ ಪಂದ್ಯಾವಳಿ ವೇಳೆ ನಟಿ ಸಮ್ರೀನ್ ಕೌರ್, ಪಂಜಾಬ್ ಕಿಂಗ್ಸ್ ತಂಡದ ಹಲವು ಪಂದ್ಯಗಳಿಗೆ ಸಾಯಾಗಿದ್ದರು. ಅವರ ಸಡನ್ ಕ್ರಿಕೆಟ್ ಪ್ರೇಮದ ಬಗ್ಗೆ ಹಲವರಲ್ಲಿ ಆಶ್ಚರ್ಯ ಮೂಡಿತ್ತು. ಅದರ ನಡುವೆಯೇ ಧರ್ಮಶಾಲಾದಲ್ಲಿ ಅರ್ಷದೀಪ್ ಮತ್ತು ಸಮ್ರೀನ್ ಕೈಕೈ ಹಿಡಿದು ಓಡಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲಿಗೆ ಭಾರತ ತಂಡದ ವೇಗಿಗೆ "83' ಖ್ಯಾತಿಯ ನಟಿ ಸಮ್ರೀನ್ ಕ್ಲೀನ್ ಬೌಲ್ಡ್ ಆಗಿದ್ದಾರೆ ಎಂಬುದು ತಿಳಿದು ಬಂತು. ಇದೀಗ ಅರ್ಷದೀಪ್, ಸಮ್ರೀನ್ ಜತೆಗಿನ ಫೋಟೋಗಳನ್ನು ಮೊದಲ ಬಾರಿಗೆ ಹಂಚಿಕೊಂಡು "ನನ್ನವಳು' ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಜೋಡಿಗೆ ಶುಭಹಾರೈಸುತ್ತಿದ್ದಾರೆ. ಜಮ್ಮು ಕಾಶ್ಮೀರ ಮೂಲದ ಸಮ್ರೀನ್, 2018ರಲ್ಲಿ ಮಿಸ್ ಇಂಡಿಯಾದಲ್ಲಿ ಸ್ಪರ್ಧಿಸಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ನಂತರ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು "83' ಸೇರಿ ಕೆಲ ಚಿತ್ರಗಳಲ್ಲಿ ನಟಿಸಿದ್ದು, ಹಲವು ವಿಡಿಯೋ ಆಲ್ಬಂ ಸಾಂಗ್ಗಳಲ್ಲೂ ಮಿಂಚಿದ್ದಾರೆ.