ಮೈದಾನದಲ್ಲಿ ಕ್ರಿಕೆಟ್ ಫೈಟ್, ಪೆವಿಲಿಯನ್‌ನಲ್ಲಿ ಕಪಲ್ಸ್ ಫೈಟ್! ವೈರಲ್ ವಿಡಿಯೋ ನೋಡಿ ನೆಟ್ಟಿಗರು ಅಂದಿದ್ದೇನು? Viral Video

ಕಲ್ಕತ್ತಾದ ಈಡನ್​ ಗಾಡರ್ನ್​ನಲ್ಲಿ ಸೆರೆಯಾದ ವಿಡಿಯೋ
ಕಲ್ಕತ್ತಾದ ಈಡನ್​ ಗಾಡರ್ನ್​ನಲ್ಲಿ ಸೆರೆಯಾದ ವಿಡಿಯೋ
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ ಪಂದ್ಯದ ನಡುವೆ ಕಪಲ್ಸ್​ ಫೈಟ್​!
  • ಕಲ್ಕತ್ತಾದ ಈಡನ್​ ಗಾಡರ್ನ್​ನಲ್ಲಿ ಸೆರೆಯಾದ ವಿಡಿಯೋ
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​
ಐಪಿಎಲ್​: ಭಾರತದಲ್ಲಿ ಐಪಿಎಲ್​ ಎಂದರೆ ಅದು ಕೇವಲ ಕ್ರಿಕೆಟ್​ ಮಾತ್ರವಲ್ಲ ಮನೆರಂಜನೆಯ ಮಹಾಪೂರವೆಂದರೆ ತಪ್ಪಾಗದು. ಈ ಟೂರ್ನಿ ಇಷ್ಟೊಂದು ಖ್ಯಾತಿ ಗಳಿಸಲು ಬ್ಯಾಟರ್, ಬೌಲರ್, ಫೀಲ್ಡರ್​ಗಳ ಜೊತೆಗೆ ಕ್ಯಾಮರಾಮನ್​ಗಳ ಪಾತ್ರ ಸಹ ಬಹಳ ಪ್ರಮುಖವಾಗಿದೆ.
ಪಂದ್ಯಾವಳಿಯನ್ನು ವೀಕ್ಷಿಸಲು ಬರುವ ಯುವಕ ಯುವತಿಯರ ರಂಗಬಿರಂಗಿ ಭಂಗಿಯಲ್ಲಿ ಅವರ ಚಲನ-ವಲನವನ್ನು ಸೆರೆಹಿಡಿಯುವುದು ಕ್ಯಾಮರಾಮನ್​ಗಲ ಖಯಾಲಿ ಎಂದರೆ ಸುಳ್ಳಲ್ಲ. ಇದೇ ಕ್ಯಾಮರಾಮ್ಯಾನ್​ಗಳು ಸೆರೆಹಿಡಿದ ರಂಗಭಿರಂಗಿ ವಿಡಿಯೋವೊಂದು ಸೋಶಿಯಲ್ ಮೀಡಿಯಾನಲ್ಲಿ ಸಖತ್​ ವೈರಲ್​ (Viral Video) ಆಗುತ್ತಿದೆ.

ಪೆವಿಲಿಯನ್​ನಲ್ಲಿ ಕಪಲ್ಸ್​ ಫೈಟ್​!

ವೈರಲ್​ ಆಗುತ್ತಿರುವ ವಿಡಿಯೋನಲ್ಲಿ ಏಪ್ರಿಲ್​ 9 ರಂದು ಕಲ್ಕತ್ತಾದ ಇಡನ್​ ಗಾಡರ್ನನಲ್ಲಿ ನಡೆದ ಕಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ಲಕ್ನೋ ಸೂಪರ್​ ಜೈಂಟ್ಸ್​ ನಡುವಿನ ಪಂದ್ಯದಲ್ಲಿ ಸೆರೆಯಾದ ವಿಡಿಯೋ ಎಂದು ಹೇಳಲಾಗುತ್ತಿದೆ.
ಈ ವಿಡಿಯೋನಲ್ಲಿ, ಯುವಕ ಮತ್ತು ಯುವತಿ (ಬಹುಶಃ ಗಂಡ ಹೆಂಡತಿ ಅಥವಾ ಪ್ರೇಯಸಿ- ಪ್ರಿಯಕರ) ಪೆವಿನಿಯನ್​ ನಲ್ಲಿ ಯಾವುದೋ ವಿಷಯಕ್ಕೆ ಮನಸ್ಥಾಪ ಮಾಡಿಕೊಂಡು ಪರಸ್ಪರ ಬೈದುಕೊಳ್ಳುವುದನ್ನು ನಾವು ನೋಡ ಬಹುದಾಗಿದೆ. ಯುವಕ, ಆ ಯುವತಿಗೆ ತಲೆಗೆ ಹೊಡೆದರೆ ಯುವತಿ ಆ ಯುವಕನ ಕೈ ಬೆರಳನ್ನು ಮುರಿಯಲು ಪ್ರಯತ್ನಿಸುವುದನ್ನು ಕಾಣಬಹುದಾಗಿದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಭಾರಿ ವೈರಲ್​ ಅಗಿದ್ದು, ಇಲ್ಲಿವರೆಗೆ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ಅಂತಯೇ ಈ ವಿಡಿಯೋಗೆ ನೆಟ್ಟಿಗರು ತರಾವರಿ ಕಮೆಂಟ್​ಗಳು ಹರಿದು ಬಂದಿದೆ.
ಇವರಿಗೆ ಜಗಳವಾಡಲು ಬೇರೆ ಯಾವುದೇ ಸ್ಥಳ ಸಿಗದೆ ಇಲ್ಲಿದೆ ಬಂದಿದ್ದಾರಾ? ಎಂದು ಒಬ್ಬರು ಪ್ರಶ್ನೆ ಮಾಡಿದರೆ, ಇದೇ ಕಾರಣಕ್ಕೆ ನಾನು ನನ್ನ ಹುಡುಗಿಯನ್ನು ಮ್ಯಾಚ್​ ನೋಡಲು ಕರೆದೊಯ್ಯಲ್ಲ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.
ಕ್ರಿಕೆಟ್​ ಜೊತೆಗೆ ಕಿತ್ತಾಟವನ್ನು ವೀಕ್ಷಕರು ನೋಡುವಂತಾಯಿತು, ಪೈಸಾ ವಸೂಲ್​! ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. ಒಟ್ಟಾರೆ ಈ ಯುವಕ-ಯುವತಿಯ ಜಗಳದ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದು, ನೆಟ್ಟಿಗರು ಸಖತ್​ ಎಂಜಾಯ್ ಮಾಡುತ್ತಿದ್ದಾರೆ ಎಂದರೆ ಸುಳ್ಳಲ್ಲ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net