ಮಹಿಳಾ ಏಷ್ಯಾಕಪ್​ನಲ್ಲಿ ಮತ್ತೆ ಭಾರತ V/s​ ನಖ್ವಿ!

ಮಹಿಳಾ ಏಷ್ಯಾಕಪ್​ನಲ್ಲಿ ಮತ್ತೆ ಭಾರತ V/s​ ನಖ್ವಿ!
ಮಹಿಳಾ ಏಷ್ಯಾಕಪ್​ನಲ್ಲಿ ಮತ್ತೆ ಭಾರತ V/s​ ನಖ್ವಿ!
Published on

ನವದೆಹಲಿ: ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ (ಎಸಿಸಿ) ಅಧ್ಯಕ್ಷರಾಗಿರುವ ಪಾಕಿಸ್ತಾನದ ಮೊಹ್ಸಿನ್​ ನಖ್ವಿ ಕೈಯಿಂದ ಭಾರತ ತಂಡ ಕಳೆದ ವರ್ಷ ಪುರುಷರ ಏಷ್ಯಾಕಪ್​ ಟಿ20 ಟೂರ್ನಿಯ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಇದರಿಂದ ಕೊನೆಗೆ ಭಾರತಕ್ಕೆ ಬೇರೆಯವರೂ ಪ್ರಶಸ್ತಿ ವಿತರಿಸಲು ಬಿಡದೆ ನಖ್ವಿ ಉದ್ದಟತನ ಮೆರೆದಿದ್ದರು. ಇದೀಗ ಮತ್ತೆ ಮಹಿಳಾ ಟಿ20 ಏಷ್ಯಾಕಪ್ (

Women''s Asia Cup

)​ ಟೂರ್ನಿಗೆ ದುಬೈನಲ್ಲಿ ವೇದಿಕೆ ಸಜ್ಜಾಗುತ್ತಿರುವ ನಡುವೆ, ಭಾರತದ ಮಹಿಳೆಯರು ಟ್ರೋಫಿ ಗೆದ್ದರೂ ಮತ್ತೆ ಇಂಥದ್ದೇ ಸನ್ನಿವೇಶ ಸೃಷ್ಟಿಯಾಗುವ ಸಾಧ್ಯತೆ ಕಾಣಿಸಿದೆ.


ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಮುಖ್ಯಸ್ಥ ನಖ್ವಿ ಈಗಲೂ ಅಧ್ಯಕ್ಷರಾಗಿದ್ದು, ಮಹಿಳಾ ಏಷ್ಯಾಕಪ್​ನಲ್ಲಿ ಮತ್ತೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗುವ ನಿರೀಕ್ಷೆ ಇದೆ. ಆಗಸ್ಟ್​ 28ರಿಂದ ಸೆಪ್ಟೆಂಬರ್​ 13ರವರೆಗೆ ನಡೆಯಲಿರುವ ಮಹಿಳಾ ಏಷ್ಯಾಕಪ್​ನಲ್ಲಿ ಭಾರತ&ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿದ್ದು, ಸೆಪ್ಟೆಂಬರ್​ 5ಕ್ಕೆ ಮುಖಾಮುಖಿ ಆಗಲಿವೆ.

ಏಕದಿನ ವಿಶ್ವ ಚಾಂಪಿಯನ್​ ಆಗಿರುವ ಹರ್ಮಾನ್​ಪ್ರೀತ್​ ಕೌರ್​ ಪಡೆ ಏಷ್ಯಾಕಪ್​ನಲ್ಲಿ ಫೇವರಿಟ್​ ಎನಿಸಿದ್ದು, ಪ್ರಶಸ್ತಿ ಗೆದ್ದರೆ ಸೂರ್ಯಕುಮಾರ್​ ಯಾದವ್​ ಬಳಗದಂತೆ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸುವುದು ಖಚಿತ. ಹೀಗಾಗಿ ನಖ್ವಿ ಈ ಬಾರಿಯೂ ಟ್ರೋಫಿಯನ್ನು ತಾನೇ ವಿತರಿಸಬೇಕೆಂದು ಪಟ್ಟು ಹಿಡಿಯುವರೇ ಎಂಬ ಪ್ರಶ್ನೆ ಮೂಡಿದೆ. ಒಂದು ವೇಳೆ ನಖ್ವಿ ತನ್ನ ಉದ್ದಟತನ ಮುಂದುವರಿಸಿದರೆ, ಹರ್ಮಾನ್​ಪ್ರೀತ್​ ಕೌರ್​ ಪಡೆಯೂ ಚಾಂಪಿಯನ್​ ಪಟ್ಟಕ್ಕೇರಿದರೂ ಟ್ರೋಫಿ ಇಲ್ಲದೆ ತವರಿಗೆ ಮರಳಬೇಕಾಗುತ್ತದೆ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net