ಈ ಬಾರಿ ಐಪಿಎಲ್ನಲ್ಲಿ ಕರ್ನಾಟಕದ 10 ಕ್ರಿಕೆಟಿಗರು ವಿವಿಧ ತಂಡಗಳಲ್ಲಿದ್ದರೂ, ಕೆಲವರಷ್ಟೇ ಆಡುವ 11ರ ಬಳಗದಲ್ಲಿ (ಪಡಿಕ್ಕಲ್, ರಾಹುಲ್) ಕಾಯಂ ಸ್ಥಾನ ಪಡೆಯುತ್ತಿರುವ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ರಾಜ್ಯ ತಂಡದ ನಾಯಕ ದೇವದತ್ ಪಡಿಕ್ಕಲ್, ರಾಜ್ಯದ 10 ಆಟಗಾರರು ಐಪಿಎಲ್ನಲ್ಲಿರುವುದೇ ದೊಡ್ಡ ವಿಷಯ. ಕಳೆದ ಒಂದೆರಡು ವರ್ಷಗಳಲ್ಲಿ ದೇಶೀಯ ಟಿ20 ಟೂರ್ನಿಗಳಲ್ಲಿ (ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ) ನಮ್ಮ ತಂಡ ಅಷ್ಟೇನೂ ಉತ್ತಮವಾಗಿ ಆಡಿಲ್ಲ. ಕಳೆದ ಬಾರಿ ನಾಕೌಟ್ಗೂ ಅರ್ಹತೆ ಪಡೆಯಲಿಲ್ಲ. ನಮ್ಮ ಎಲ್ಲ 10 ಆಟಗಾರರು ಆಡದಿದ್ದರೂ, ಅವರು ಅನುಭವ ಪಡೆಯಲಿದ್ದಾರೆ. ಇದು ಮುಂದಿನ ಋತುವಿನಲ್ಲಿ ಅವರಿಗೆ ಇನ್ನಷ್ಟು ಉತ್ತಮ ನಿರ್ವಹಣೆ ತೋರಲು ನೆರವಾಗಲಿದೆ. ಇದರಿಂದ ಮುಂದಿನ ಐಪಿಎಲ್ನಲ್ಲಿ ರಾಜ್ಯದಿಂದ ಇನ್ನಷ್ಟು ಆಟಗಾರರು ಅವಕಾಶವನ್ನೂ ಪಡೆಯಬಹುದು ಮತ್ತು ಆಡುವ 11ರ ಬಳಗದಲ್ಲೂ ಸ್ಥಾನ ಗಳಿಸಬಹುದು ಎಂದರು.