ಸಾತ್ವಿಕ್-ಚಿರಾಗ್‌ಗೆ ಚೀನಾ ಮಾಸ್ಟರ್ಸ್‌ ಕಿರೀಟ: ಹಾಲಿ ಋತುವಿನಲ್ಲಿ ಎರಡನೇ ಪ್ರಶಸ್ತಿ ಗೆದ್ದ ಭಾರತೀಯ ಜೋಡಿ

ಸಾತ್ವಿಕ್-ಚಿರಾಗ್‌ಗೆ ಚೀನಾ ಮಾಸ್ಟರ್ಸ್‌ ಕಿರೀಟ: ಹಾಲಿ ಋತುವಿನಲ್ಲಿ ಎರಡನೇ ಪ್ರಶಸ್ತಿ ಗೆದ್ದ ಭಾರತೀಯ ಜೋಡಿ
ಸಾತ್ವಿಕ್-ಚಿರಾಗ್‌ಗೆ ಚೀನಾ ಮಾಸ್ಟರ್ಸ್‌ ಕಿರೀಟ: ಹಾಲಿ ಋತುವಿನಲ್ಲಿ ಎರಡನೇ ಪ್ರಶಸ್ತಿ ಗೆದ್ದ ಭಾರತೀಯ ಜೋಡಿ
Published on
ಶೆನ್ಜೆನ್ (ಚೀನಾ): ಭಾರತದ ಅಗ್ರ ಡಬಲ್ಸ್ ತಾರೆಯರಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ ಆರಂಭಿಕ ಹಿನ್ನಡೆಯಿಂದ ಪುಟಿದೆದ್ದು, ಚೀನಾ ಮಾಸ್ಟರ್ಸ್‌ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿತು. ಮಾಜಿ ವಿಶ್ವ ನಂ.1 ಸಾತ್ವಿಕ್-ಚಿರಾಗ್ ಜೋಡಿಗೆ ಹಾಲಿ ಋತುವಿನ ಎರಡನೇ ಪ್ರಶಸ್ತಿ ಇದಾಗಿದ್ದು, ಕಳೆದ ವರ್ಷ ಕೈತಪ್ಪಿದ್ದ ಪದಕ ಜಯಿಸುವಲ್ಲಿ ಯಶಸ್ಸು ಕಂಡಿದೆ. ಇದರೊಂದಿಗೆ ಮುಂಬರುವ ಏಷ್ಯನ್ ಗೇಮ್ಸ್‌ಗೆ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ.
ವಿಶ್ವ ನಂ.5 ಸಾತ್ವಿಕ್-ಚಿರಾಗ್ ಭಾನುವಾರ ನಡೆದ ಪಂದ್ಯದಲ್ಲಿ ಮೂರು ಗೇಮ್‌ಗಳ ಹೋರಾಟದಲ್ಲಿ 11-21, 21-13, 21-17ರಿಂದ ಆತಿಥೇಯ ಚೀನಾದ ಹಿ ಜಿ ಟಿಂಗ್-ರೆನ್ ಕ್ಸಿಯಾಂಗ್ ಯು ಜೋಡಿಯನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದರು. ಹಾಲಿ ವರ್ಷ ಸಿಂಗಾಪುರ ಓಪನ್ ಪ್ರಶಸ್ತಿ ಜಯಿಸಿದ್ದ ಸಾತ್ವಿಕ್-ಚಿರಾಗ್ ಒಂದು ಗಂಟೆ 10 ನಿಮಿಷಗಳ ಕಾದಾಟದಲ್ಲಿ ಮಾಜಿ ವಿಶ್ವ ನಂ.4 ಹಿ-ರೆನ್ ಜೋಡಿ ಎದುರು ಮೇಲುಗೈ ಸಾಧಿಸಿತು.
ಥರ್ಡ್ ಟೈಮ್ ಲಕ್ಕಿ!
2023, 2025ರ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ಸಾತ್ವಿಕ್-ಚಿರಾಗ್ 3ನೇ ಫೈನಲ್‌ನಲ್ಲಿ ಪ್ರಶಸ್ತಿ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಸಾತ್ವಿಕ್-ಚಿರಾಗ್ ಜೋಡಿ ಪ್ರಶಸ್ತಿ ಕಾದಾಟದ ಮೊದಲ ಗೇಮ್‌ನಲ್ಲಿ ಹಿನ್ನಡೆ ಎದುರಿಸಿತು. ನಂತರ ವಿಶ್ವ ನಂ.70 ಹಿ-ರೆನ್ ಜೋಡಿಗೆ ತಿರುಗೇಟು ನೀಡಿದ ಸಾತ್ವಿಕ್-ಚಿರಾಗ್ ಗೆಲುವು ಒಲಿಸಿಕೊಂಡಿತು. ಹಾಲಿ ಟೂರ್ನಿಯಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಮೂರು ಗೇಮ್‌ಗಳ ಪಂದ್ಯವನ್ನು ಮೂರನೇ ಬಾರಿ ಆಡಿದ ದೃಷ್ಟಾಂತ ಇದಾಗಿದೆ. ಹಾಲಿ ಋತುವಿನಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಆಡಿದ 10ನೇ ಟೂರ್ನಿಗಳಲ್ಲಿ 3ನೇ ಫೈನಲ್ ಇದಾಗಿತ್ತು.
87: ಸಾತ್ವಿಕ್-ಚಿರಾಗ್ ಜೋಡಿ ಪ್ರಶಸ್ತಿ ಗೆಲುವಿನೊಂದಿಗೆ 87.40 ಲಕ್ಷ ರೂ. ನಗದು ಬಹುಮಾನ ಮೊತ್ತ ಗಳಿಸಿತು.
4: ಸಾತ್ವಿಕ್-ಚಿರಾಗ್ ಜೋಡಿ ಹಾಲಿ ವರ್ಷ ಎರಡನೇ ಮತ್ತು ಒಟ್ಟಾರೆ ನಾಲ್ಕನೇ ಸೂಪರ್-750 ಪ್ರಶಸ್ತಿ ಗೆದ್ದುಕೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net