ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅನೇಕ ಜನರು ಈ ಚೂಯಿಂಗ್ ಗಮ್ ಅನ್ನು ಅಗಿಯುತ್ತಾರೆ. ಆದಾಗ್ಯೂ, ಚಿಕ್ಕ ಮಕ್ಕಳು ಇದನ್ನು ತಿಂದರೆ ಹಿರಿಯರು ಅಥವಾ ಪಾಲಕರು ಆಕ್ರೋಶಗೊಳ್ಳುತ್ತಾರೆ. ಏಕೆಂದರೆ ತಪ್ಪಾಗಿ ನುಂಗಿಬಿಟ್ಟರೆ ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ ಎನ್ನುತ್ತಾರೆ. ಆದರೆ, ಈ ಚೂಯಿಂಗ್ ಗಮ್ ಅನಾರೋಗ್ಯಕರ ಮಾತ್ರವಲ್ಲ, ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಚೂಯಿಂಗ್ ಗಮ್ ಡಬಲ್ ಚಿನ್ (ಗಲ್ಲ) ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೆ, ಮೆದುಳಿನ ಹಿಪೊಕ್ಯಾಂಪಸ್ ಎಂಬ ಭಾಗವನ್ನು ಸಕ್ರಿಯಗೊಳಿಸುತ್ತದೆ. ಇದರ ಪರಿಣಾಮ ಸ್ಮರಣೆ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೆ, ಚೂಯಿಂಗ್ ಗಮ್ ಅಗಿಯುವುದರಿಂದ ಒತ್ತಡ ಮತ್ತು ಕಿರಿಕಿರಿ ಕಡಿಮೆಯಾಗುತ್ತದೆ. ಅಲ್ಲದೆ, ಬಾಯಿಯ ದುರ್ವಾಸನೆಯನ್ನು ಸಹ ಕಡಿಮೆ ಮಾಡುತ್ತದೆ. ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕುತ್ತದೆ.