ಅದೇ ಸಮಯದಲ್ಲಿ, ಧೋನಿಯನ್ನು ನೋಡಿದ ನಂತರ ಕೆಲವು ಅಭಿಮಾನಿಗಳು ತುಂಬಾ ಭಾವುಕರಾಗಿ ಅಳುತ್ತಿರುವುದು ಕಂಡುಬಂತು. 2020ರಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ, ಅವರು ಐಪಿಎಲ್‌ನಲ್ಲಿ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದಾರೆ. ಆದರೆ, ಈ ಬಾರಿ, ಧೋನಿಯನ್ನು ನೋಡಿದ ಕೂಡಲೇ ಅಭಿಮಾನಿಗಳು ಈ ಪರಿ ದುಃಖ ವ್ಯಕ್ತಪಡಿಸಲು ಕಾರಣವೆಂದರೆ ಬಹುಶಃ ಧೋನಿಯ ಕೊನೆಯ ಸೀಸನ್ ಇದಾಗಿರಬಹುದು.