ಮಹಾರಾಜ ಟ್ರೋಫಿ ಟಿ20: ನಿಕಿನ್​ ಜೋಸ್​ ಶತಕ; ಕೋಸ್ಟಲ್​ ಕಿಂಗ್ಸ್​ ಮಂಗಳೂರು ಜಯಭೇರಿ

ಮಹಾರಾಜ ಟ್ರೋಫಿ ಟಿ20: ನಿಕಿನ್​ ಜೋಸ್​ ಶತಕ; ಕೋಸ್ಟಲ್​ ಕಿಂಗ್ಸ್​ ಮಂಗಳೂರು ಜಯಭೇರಿ
ಮಹಾರಾಜ ಟ್ರೋಫಿ ಟಿ20: ನಿಕಿನ್​ ಜೋಸ್​ ಶತಕ; ಕೋಸ್ಟಲ್​ ಕಿಂಗ್ಸ್​ ಮಂಗಳೂರು ಜಯಭೇರಿ
Published on
ಮೈಸೂರು: ಆರಂಭಿಕ ನಿಕಿನ್​ ಜೋಸ್​ (100*ರನ್​, 47 ಎಸೆತ, 7 ಬೌಂಡರಿ, 8 ಸಿಕ್ಸರ್​) ಭರ್ಜರಿ ಶತಕದ ಬಲದಿಂದ ಕೋಸ್ಟಲ್​ ಕಿಂಗ್ಸ್​ ಮಂಗಳೂರು ತಂಡ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ20 (Maharaja Trophy KSCA T20) ಟೂರ್ನಿಯಲ್ಲಿ ಸೋಮವಾರದ 2ನೇ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್​ ವಿರುದ್ಧ 8 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ.
ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಗುಲ್ಬರ್ಗ, ನಾಯಕ ಮನೀಶ್​ ಪಾಂಡೆ (70 ರನ್​, 34 ಎಸೆತ, 7 ಬೌಂಡರಿ, 3 ಸಿಕ್ಸರ್​) ಆಕರ್ಷಕ ಅರ್ಧಶತಕದ ನಡುವೆ 19.5 ಓವರ್​ಗಳಲ್ಲಿ 177 ರನ್​ಗೆ ಸರ್ವಪತನಗೊಂಡಿತು. ಪ್ರತಿಯಾಗಿ ಮಂಗಳೂರು 16.3 ಓವರ್​ಗಳಲ್ಲೇ 2 ವಿಕೆಟ್​ಗೆ 181 ರನ್​ ಗಳಿಸಿ ಜಯಿಸಿತು.

ಗುಲ್ಬರ್ಗ: 19.5 ಓವರ್​ಗೆ 177 (ಲೋಚನ್​ 14, ಶರತ್​ 8, ಪ್ರಖರ್​ 25, ತಿಪ್ಪಾರೆಡ್ಡಿ 25, ಮನೀಷ್​ ಪಾಂಡೆ 70, ಧ್ರುವ್​ 22, ಶ್ರೇಯಸ್​ 39ಕ್ಕೆ 2, ಸಿ.ಎ.ಕಾರ್ತಿಕ್​ 16ಕ್ಕೆ2, ವಿ.ಕೌಶಿಕ್​ 32ಕ್ಕೆ 2), ಕೋಸ್ಟಲ್​ ಕಿಂಗ್ಸ್​ ಮಂಗಳೂರು: 16.3 ಓವರ್​ಗಳಲ್ಲಿ 2 ವಿಕೆಟ್​ಗೆ 181 (ನಿಕಿನ್​ 100*, ಕರುಣ್​ ನಾಯರ್​ 56, ಆದಿತ್ಯ 30ಕ್ಕೆ 1).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net