

ವೆಲ್ಲಿಂಗ್ಟನ್: ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಗುರುವಾರ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡ ತಾಲೀಮು ಆರಂಭಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ 4ನೇ ಆವೃತ್ತಿಯಲ್ಲಿ ಫೈನಲ್ಗೇರುವ ಅವಕಾಶ ವೃದ್ಧಿಸಿಕೊಳ್ಳಲು ಭಾರತದ ಪಾಲಿಗೆ ಮಹತ್ವದಾಗಿರುವ ಸರಣಿಯಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ ಎಂದು ನಾಯಕ ಶುಭಮಾನ್ ಗಿಲ್ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಎಲ್ಲ ವೇಗದ ಬೌಲರ್ಗಳು ಏಕದಿನ ಸರಣಿಯಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದು, ಆಡುವ ಹನ್ನೊಂದರ ಬಳಗ ಆಯ್ಕೆ ನಿಜಕ್ಕೂ ಸವಾಲೆನಿಸಿದೆ ಎಂದರು. ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಪುನರಾಗಮನ ತಂಡದ ಬಲವನ್ನು ಇನ್ನಷ್ಟು ಹೆಚ್ಚಿಸಿದ್ದು, ನಾವು ನಾಲ್ವರು ವೇಗಿಗಳೊಂದಿಗೆ ಆಡಲು ಬಯಸುತ್ತೇವೆ. ಆದರೆ ಅಂತಿಮವಾಗಿ ಯಾರಿಗೆ ಅವಕಾಶ ಸಿಗಲಿದೆ ಎಂಬುದನ್ನು ಕಾದು ನೋಡಬೇಕು. ಸಾಮಾನ್ಯವಾಗಿ ಕಿವೀಸ್ನಲ್ಲಿ ಮೂರನೇ ದಿನದಿಂದ ಪಿಚ್ಗಳು ಟ್ ಆಗಲಿದೆ. ಆದ್ದರಿಂದ ಚೆಂಡು ಹಳೆಯದಾದ ನಂತರ ಪಿಚ್ಗೆ ಬಡಿದು ಹೆಚ್ಚು ಪುಟಿಯುವಂತೆ ಮಾಡುವ ಬೌಲರ್ಗಳ ಅವಶ್ಯಕತೆ ನಮಗಿದೆ ಎಂದು 27 ವರ್ಷದ ಗಿಲ್ ಅಭಿಪ್ರಾಯಪಟ್ಟರು. ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಗುರ್ನೂರ್ ಬ್ರಾರ್, ಆಕಾಶ್ ದೀಪ್ ಮತ್ತು ಅಂಶುಲ್ ಕಂಬೋಜ್ ಆರು ತಜ್ಞ ವೇಗ ಬೌಲರ್ಗಳ ಆಯ್ಕೆಯೂ ಭಾರತ ತಂಡಕ್ಕಿದೆ.
ಪಂತ್ ವಿಚಾರದಲ್ಲಿ ಗೊಂದಲವಿಲ್ಲ
ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಫಿಟ್ನೆಸ್ ಹಾಗೂ ಫಾರ್ಮ್ ಕುರಿತ ಸ್ಪಷ್ಟನೆ ನೀಡಿದ ಗಿಲ್, ತಂಡದಲ್ಲಿ ಪಂತ್ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ಅವರು ಈಗಾಗಲೇ 50 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಜತೆಗೆ ಹಲವು ದೇಶಗಗಳಲ್ಲಿ ರನ್ಗಳಿಸುವ ಮೂಲಕ ಆಸ್ಟ್ರೇಲಿಯಾದಂಥ ಪಿಚ್ಗಳಲ್ಲೂ ಶತಕ ಸಿಡಿಸಿರುವ ಅನುಭವಿ ವಿಕೆಟ್ ಕೀಪರ್ ಅವರು ಎಂದು ಪಂತ್ಗೆ ಬೆಂಬಲ ಸೂಚಿಸಿದರು.
ಟೆಸ್ಟ್ ಸರಣಿಯಿಂದ ಸ್ಯಾಂಟ್ನರ್ ಔಟ್
ನ್ಯೂಜಿಲೆಂಡ್ ಟೆಸ್ಟ್ ಸರಣಿ ಆರಂಭಕ್ಕೆ ಮುನ್ನವೇ ಆಘಾತ ಎದುರಿಸಿದ್ದು, ಸೀಮಿತ ಓವರ್ಗಳ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಸರಣಿಯಿಂದಲೇ ಹೊರಗುಳಿಯಲಿದ್ದಾರೆ. ಐದನೇ ಏಕದಿನ ಪಂದ್ಯದ ವೇಳೆ ಬಲಗೈ ಮೂಳೆ ಮುರಿತಕ್ಕೆ ಒಳಗಾಗಿರುವ ಅನುಭವಿ ಸ್ಪಿನ್-ಬೌಲಿಂಗ್ ಆಲ್ರೌಂಡರ್ ಸ್ಯಾಂಟ್ನರ್ ಅಲಭ್ಯತೆಯನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಖಾತ್ರಿ ಪಡಿಸಿದೆ. ಸ್ಯಾಂಟ್ನರ್ ಬದಲಿಗೆ ಆಲ್ರೌಂಡರ್ ಡೀನ್ ಾಕ್ಸ್ಕ್ರ್ಟಾ ಕಿವೀಸ್ ತಂಡ ಸೇರಲಿದ್ದಾರೆ. ಮೊದಲ ಟೆಸ್ಟ್ ಪಂದ್ಯ ಗುರುವಾರದಿಂದ ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ನಲ್ಲಿ ನಡೆಯಲಿದೆ.