ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಬ್ಬಂದಿಯೊಬ್ಬರು ಧೋನಿ ಜೊತೆ ನಡೆದು ಬರುತ್ತಿರುವಾಗ, ಕೇವಲ ಧೋನಿ ಅವರನ್ನು ಚಿತ್ರೀಕರಿಸುವ ಉದ್ದೇಶದಿಂದ ಕ್ಯಾಮರಾಮನ್ ಆ ಸಿಬ್ಬಂದಿಯನ್ನು ಪಕ್ಕಕ್ಕೆ ಸರಿಯುವಂತೆ ಹೇಳುತ್ತಾರೆ. ಇದನ್ನು ಗಮನಿಸಿದ ಧೋನಿ, ಕೂಡಲೇ ಆ ಸಿಬ್ಬಂದಿಯನ್ನು ದೂರ ಹೋಗದಂತೆ ತಡೆದು, ಹತ್ತಿರ ಬರುವಂತೆ ಹೇಳಿ, ಅವರ ಹೆಗಲ ಮೇಲೆ ಕೈ ಹಾಕಿ ಆತ್ಮೀಯವಾಗಿ ಜೊತೆಯಲ್ಲಿಯೇ ಕರೆದುಕೊಂಡು ಹೋಗುವ ದೃಶ್ಯ ವೈರಲ್ ವಿಡಿಯೋದಲ್ಲಿದೆ.