

ನವದೆಹಲಿ: ಬಿಡಬ್ಲುೃಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಮಹಿಳಾ ಡಬಲ್ಸ್‌ನಲ್ಲಿ ಆತಿಥೇಯ ಭಾರತದ ಗಾಯತ್ರಿ ಗೋಪಿಚಂದ್ ಹಾಗೂ ತ್ರೀಸಾ ಜೋಲಿ ಜೋಡಿಯ ಅಮೋಘ ಪ್ರದರ್ಶನ ಸೆಮಿಫೈನಲ್‌ನಲ್ಲಿ ಕೊನೆಗೊಂಡಿತು. ಶನಿವಾರ ನಡೆದ 4ರ ಘಟ್ಟದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹಾಗೂ ವಿಶ್ವ ನಂ.1 ಚೀನಾದ ಲಿಯು ಶೆಂಗು ಶು- ಟನ್ ನಿಂಗ್ ಜೋಡಿ ಎದುರು ಪರಾಭವಗೊಂಡ ಗಾಯತ್ರಿ-ತ್ರೀಸಾ ಜೋಡಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು. 2011ರ ನಂತರ ಮಹಿಳಾ ಡಬಲ್ಸ್‌ನಲ್ಲಿ ಭಾರತಕ್ಕೆ ಒಲಿದ ಮೊದಲ ಪದಕವೂ ಇದಾಗಿದ್ದು, ಟೂರ್ನಿಯಲ್ಲಿ ಆತಿಥೇಯರ ಸವಾಲು ಅಂತ್ಯ ಕಂಡಿದೆ.