

ಫ್ರಾನ್ಸ್ನ ಅಲೆಕ್ಸ್ ಲನೈರ್ ಹಾಗೂ ಕೊರಿಯಾದ ಅನ್ ಸೆ ಯಂಗ್ 17 ವರ್ಷಗಳ ಬಳಿಕ ಭಾರತದ ಆತಿಥ್ಯದಲ್ಲಿ ನಡೆದ ಬಿಡಬ್ಲುೃಎಫ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ (
BWF World Championships)
ಕ್ರಮವಾಗಿ ಪುರುಷರ-ಮಹಿಳೆಯರ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಮಿಶ್ರ ಡಬಲ್ಸ್‌ನಲ್ಲಿ
ಫ್ರಾನ್ಸ್
ನವರೇ ಆದ ಥಾಮ್ ಗಿಕ್ವೆಲ್-ಡೆಲ್ವಿನ್ ಡೆಲ್ರೋ, ಪುರುಷರ ಡಬಲ್ಸ್‌ನಲ್ಲಿ ಚೀನಾದ ಲಿಯಾಂಗ್ ವಿಯಿ ಕೆಂಗ್ -ವಾಂಗ್ ಚಾಂಗ್, ಮಹಿಳೆಯ ವಿಭಾಗದಲ್ಲಿ ಕೊರಿಯಾದ ಬೇಕ್ ಹ ನ-ಲೀ ಸೊ ಹೋ ಜೋಡಿಗಳು ಪ್ರಶಸ್ತಿ ಗೆದ್ದುಕೊಂಡವು.
ಫ್ರಾನ್ಸ್ನ
ಅಲೆಕ್ಸ್ ಲನೈರ್ ವಿಶ್ವ ಚಾಂಪಿಯನ್‌ಪಟ್ಟಕ್ಕೇರಿದ ಫ್ರೆಂಚ್ನ ಮೊದಲ ಪುರುಷರ ಷಟ್ಲರ್ ಎನಿಸಿದರೆ, ವಿಶ್ವ ನಂ.1 ಅನ್ ಸೆ ಯಂಗ್, ಮೂರು ಬಾರಿ ವಿಶ್ವ ಚಾಂಪಿಯನ್ ಜಪಾನ್‌ನ ಅಕಾನೆ ಯಮಗುಚಿ ಅವರನ್ನು ಮಣಿಸಿ ಎರಡನೇ ಬಾರಿಗೆ ವಿಶ್ವ ಕಿರೀಟ ಮುಡಿಗೇರಿಸಿಕೊಂಡರು. ಆತಿಥೇಯ ಭಾರತ ಮಹಿಳಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್-ತ್ರೀಸಾ ಜೋಲಿ ಜೋಡಿ ಗೆದ್ದುಕೊಟ್ಟ ಏಕೈಕ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.
ಫ್ರಾನ್ಸ್ನ
ಥಾಮ್ ಗಿಕ್ವೆಲ್-ಡೆಲ್ವಿನ್ ಡೆಲ್ರೋ ಜೋಡಿ 22-20, 19-21, 21-15 ರಿಂದ ವಿಶ್ವ ನಂ.1 ಹಾಗೂ ಚೀನಾದ ಫೆಂಗ್ ಯಾನ್ ಜೀ-ವುವಾಂಗ್ ಡಂಗ್ ಪಿಂಗ್ ಜೋಡಿಗೆ ಆಘಾತ ನೀಡಿ ಪ್ರಶಸ್ತಿ ಒಲಿಸಿಕೊಂಡಿತು. ಇದರೊಂದಿಗೆ 2019ರ ನಂತರ ಆವೃತ್ತಿಯೊಂದರಲ್ಲಿ ಚೀನಾ ಏಕೈಕ ಸ್ವರ್ಣ ಪದಕ ಜಯಿಸಿದಂತಾಗಿದೆ.
ಪುರುಷರ ಡಬಲ್ಸ್‌ನಲ್ಲಿ ಚೀನಾದ ಲಿಯಾಂಗ್ ವಿಯಿ ಕೆಂಗ್-ವಾಂಗ್ ಚಂಗ್ ಜೋಡಿ 21-17, 21-1 ರಿಂದ ಮಲೇಷ್ಯಾದ ಆರೋನ್ ಚಿಹ-ಸೊ ವೊಯಿ ಯಿಕಿ ಜೋಡಿಯನ್ನು ಮಣಿಸಿ ಚಾಂಪಿಯನ್ ಎನಿಸಿತು.